ನಿಮ್ಮ ಬಳಿ 3.53 ಲಕ್ಷ ರೂ. ಇದ್ದರೆ ಸಾಕು ನೀವು ಸೇರುತ್ತೀರಿ ವಿಶ್ವದ ಶ್ರೀಮಂತರ ಗುಂಪು; ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೇಲ್ಸ್

ವಿಶ್ವದ ಜನಸಂಖ್ಯೆಯಲ್ಲಿರುವ ಶೇಕಡಾ 10ರಷ್ಟು ಶ್ರೀಮಂತರಲ್ಲಿ ನೀವೂ ಒಬ್ಬರಾಗ್ಬೇಕು ಅಂದ್ರೆ ನೀವು ಹೆಚ್ಚು ಆಲೋಚನೆ ಮಾಡಬೇಕಾಗಿಲ್ಲ. ನಿಮಗೆ ಹೆಚ್ಚಿನ ಹಣದ ಅಗತ್ಯವೂ ಇರೋದಿಲ್ಲ ಎಂದು ಕ್ರೆಡಿಟ್ ಸ್ಯೂಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ 2018 ರ ಜಾಗತಿಕ ಸಂಪತ್ತು ವರದಿ ಹೇಳಿದೆ. ವಿಶ್ವದ ಶೇಕಡಾ 90 ರಷ್ಟು ಜನರಿಗೆ ಹೋಲಿಸಿದರೆ ನೀವು ಶ್ರೀಮಂತರಾಗಲು  93,170 ಡಾಲರ್‌ ಅಂದ್ರೆ 77,98,110 ರೂಪಾಯಿ ನಿವ್ವಳ ಮೌಲ್ಯ  ಸಾಕು.

ಕ್ರೆಡಿಟ್‌ ಸ್ಯೂಸ್‌ ಪ್ರಕಾರ, ಅಮೆರಿಕಾದಲ್ಲಿ 102 ಮಿಲಿಯನ್‌ಗಿಂತಲೂ ಹೆಚ್ಚು ಜನರು ಜಾಗತಿಕವಾಗಿ ಅಗ್ರ 10 ಪ್ರತಿಶತ ಶ್ರೀಮಂತರಪಟ್ಟಿಯಲ್ಲಿದ್ದಾರೆ. ನಿಮ್ಮ ಬಳಿ ಕೇವಲ 4,210 ಡಾಲರ್‌ ಅಂದ್ರೆ ಸುಮಾರು 3,52,367 ರೂಪಾಯಿ ಇದ್ದರೆ ನೀವು ವಿಶ್ವದ ಅರ್ಧದಷ್ಟು ಜನಸಂಖ್ಯೆಗಿಂತ ಹೆಚ್ಚು ಶ್ರೀಮಂತರಾಗಿದ್ದೀರಿ. ಜಾಗತಿಕ ಶೇಕಡಾ 1 ಕ್ಕೆ ಸೇರಲು ನಿಮಗೆ 871,320 ಡಾಲರ್‌ ಅಂದ್ರೆ ಸುಮಾರು  7,29,27,436 ನಿವ್ವಳ ಮೌಲ್ಯದ ಅಗತ್ಯವಿದೆ. ಕ್ರೆಡಿಟ್ ಸ್ಯೂಸ್ ವರದಿಯ ಪ್ರಕಾರ, ಇವರಲ್ಲಿ 19 ಮಿಲಿಯನ್‌ಗಿಂತಲೂ ಹೆಚ್ಚು ಅಮೆರಿಕನ್ನರು ಸೇರಿದ್ದಾರೆ.

ಈ ಸಂಖ್ಯೆಗಳು ನಿರಂತರ ಸಂಪತ್ತಿನ ಅಸಮಾನತೆಯ ತೀವ್ರತೆಯನ್ನು ಪ್ರತಿನಿಧಿಸುತ್ತವೆ. ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಒಟ್ಟು ಸಂಪತ್ತಿನ ಶೇಕಡಾ ಒಂದು ಭಾಗವನ್ನು ಹೊಂದಿದ್ದಾರೆ. ಶ್ರೀಮಂತರು ಸಂಪತ್ತಿನ ಒಟ್ಟು ಶೇಕಡಾ 85ರಷ್ಟು ಭಾಗವನ್ನು ಹೊಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read