ನಿಮ್ಮ ಬಳಿ 2000 ರೂ. ನೋಟು ಇದ್ದರೆ ಅಂಚೆ ಮೂಲಕ RBI ಗೆ ಕಳುಹಿಸಬಹುದು

ನವದೆಹಲಿ: ನೋಟು ವಿನಿಮಯಕ್ಕೆ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಮತ್ತು ಆರ್.ಬಿ.ಐ. ಪ್ರಾದೇಶಿಕ ಕಚೇರಿಗಳಿಂದ ದೂರ ಇರುವವರಿಗೆ ಅನುಕೂಲ ಕಲ್ಪಿಸಲು ಅಂಚೆ ಮೂಲಕವೂ 2000 ರೂ. ನೋಟು ಕಳುಹಿಸಲು ಆರ್‌ಬಿಐ ಅವಕಾಶ ಕಲ್ಪಿಸಿದೆ.

ಜನರಲ್ಲಿ 2 ಸಾವಿರ ಮುಖಬೆಲೆಯ ನೋಟುಗಳಿದ್ದಲ್ಲಿ ಅಂಚೆ ಮೂಲಕವೂ ಆರ್‌ಬಿಐ ಪ್ರಾದೇಶಿಕ ಕಚೇರಿಗಳಿಗೆ ತಲುಪಿಸಬಹುದಾಗಿದೆ ಎಂದು ಹೇಳಲಾಗಿದೆ.

ಪ್ರಸ್ತುತ ಆರ್.ಬಿ.ಐ. ಕಚೇರಿಗಳಲ್ಲಿ ಮಾತ್ರ ಈ ನೋಟು ಬದಲಾವಣೆಗೆ ಅವಕಾಶವಿದ್ದು, ಇದಕ್ಕಾಗಿ ಯಾವುದೇ ಗಡುವು ವಿಧಿಸಿಲ್ಲ. ಇದುವರೆಗೆ ಶೇಕಡ 97 ರಷ್ಟು 2 ಸಾವಿರ ರೂ. ಮುಖಬೆಲೆಯ ನೋಟುಗಳು ವಾಪಸ್ ಬಂದಿವೆ. ಇನ್ನು 10,000 ಕೋಟಿ ರೂ. ಮೌಲ್ಯದ ನೋಟುಗಳು ವಾಪಸ್ ಆಗಬೇಕಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read