BIG NEWS: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಆಸ್ತಿ ಮಾರಾಟದಿಂದ ಬ್ಯಾಂಕುಗಳಿಗೆ 14 ಸಾವಿರ ಕೋಟಿ ರೂ. ವಾಪಸ್

ನವದೆಹಲಿ: ಬಹುಕೋಟಿ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಆಸ್ತಿಗಳ ಮಾರಾಟದಿಂದ ಬಂದ 14,000 ಕೋಟಿ ರೂಪಾಯಿಗಳನ್ನು ಕಾನೂನು ಜಾರಿ ನಿರ್ದೇಶನಾಲಯ ಬ್ಯಾಂಕುಗಳಿಗೆ ಮರಳಿಸಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಆಸ್ತಿ ಮಾರಾಟದಿಂದ ವಿವಿಧ ಬ್ಯಾಂಕ್‌ಗಳಿಗೆ 14,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಹಿಂದಿರುಗಿಸುವುದು ಸೇರಿದಂತೆ ವಿವಿಧ ಹಗರಣಗಳ ಸಂತ್ರಸ್ತರಿಗೆ ಇಡಿ ಇದುವರೆಗೆ 22,280 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮರುಪಾವತಿ ಮಾಡಿದೆ ಎಂದು  ನಿರ್ಮಲಾ ಸೀತಾರಾಮನ್ ತಿಳಿಸಿದರು.

ವಜ್ರದ ವ್ಯಾಪಾರಿ ನೀರವ್ ಮೋದಿಯವರ 1,053 ಕೋಟಿ ರೂ. ನೀರವ್ ಮೋದಿ ಜೊತೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ 13,000 ಕೋಟಿ ರೂ.ಗೂ ಅಧಿಕ ಹಣ ವಸೂಲಿ ಮಾಡಿದೆ. ದೇಶದಿಂದ ಪರಾರಿಯಾಗಿದ್ದ ಮತ್ತೊಬ್ಬ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯ ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಬ್ಯಾಂಕ್ ಗಳು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಮೊರೆ ಹೋಗಿವೆ. 2,566 ಕೋಟಿ ಮೌಲ್ಯದ ಲಗತ್ತಿಸಲಾದ ಮತ್ತು ವಶಪಡಿಸಿಕೊಂಡ ಆಸ್ತಿಗಳ ಮೌಲ್ಯಮಾಪನ ಮತ್ತು ಹರಾಜು ನಡೆಸಲು ವಿಶೇಷ ನ್ಯಾಯಾಲಯವು ಇಡಿಗೆ ಅನುಮತಿ ನೀಡಿದೆ ಮತ್ತು ಮಾರಾಟದ ಹಣವನ್ನು ಪಿಎನ್‌ಬಿ ಮತ್ತು ಇತರ ಲಿಕ್ವಿಡೇಟರ್‌ಗಳ ಸ್ಥಿರ ಠೇವಣಿ ಖಾತೆಗಳಲ್ಲಿ ಜಮಾ ಮಾಡಲು ಅವಕಾಶ ನೀಡಿದೆ ಎಂದು ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read