ಎನ್​ಫೀಲ್ಡ್​ ಬೈಕ್ ​ನ್ನು ಎಲೆಕ್ಟ್ರಿಕ್​ ವಾಹನವಾಗಿ ಬದಲಾಯಿಸಿದ ಬುಲೆಟೀರ್​ ಕಸ್ಟಮ್ಸ್​

ಎಲೆಕ್ಟ್ರಿಕ್ ಮೂಲಕ ವಾಹನಗಳ ಚಾಲನೆ ಪ್ರತಿ ಆಟೋಮೊಬೈಲ್ ತಯಾರಕರ ಭವಿಷ್ಯದ ಯೋಜನೆಯಾಗಿದೆ. ಎಲೆಕ್ಟ್ರಿಕ್ ಚಲನಶೀಲತೆಯ ಹೊಸ ಅಲೆಯು 2W, 3W, 4W ಮತ್ತು ವಾಣಿಜ್ಯ ಟ್ರಕ್‌ಗಳನ್ನು ಒಳಗೊಂಡಂತೆ ಬಹುತೇಕ ಎಲ್ಲಾ ಆಟೋಮೋಟಿವ್ ವಿಭಾಗಗಳಿಗೂ ಬರ್ತಿದೆ. ಇದೀಗ ರಾಯಲ್ ಎನ್‌ಫೀಲ್ಡ್‌ನಂತಹ ಮೋಟಾರ್‌ಸೈಕಲ್ ಬ್ರಾಂಡ್‌ಗಳು ಸಹ ಈ ವಿಭಾಗಕ್ಕೆ ಎಂಟ್ರಿಕೊಡಲು ರೆಡಿಯಾಗಿದೆ.

ಇನ್ನು ಕೆಲವೇ ವರ್ಷದಲ್ಲಿ ರಾಯಲ್ ಎನ್‌ಫೀಲ್ಡ್ ಇಲೆಕ್ಟ್ರಿಕ್ ವಾಹನಗಳ ಬಿಡುಗಡೆಯು ಆಗಲಿದೆ. ಆದರೆ ಬೆಂಗಳೂರು ಮೂಲದ ಬುಲೆಟೀರ್ ಕಸ್ಟಮ್ಸ್ ಎಂಬ ಹೆಸರಿನ ಅಟೋಮೊಬೈಲ್ ಸಂಸ್ಥೆ ಹಳೆಯ ಬುಲೆಟ್ ಅನ್ನೇ ಇವಿ ಆಗಿ ಮಾರ್ಪಡಿಸಿದೆ. ಇದರ ಬಗೆಗಿನ ವಿವರ ಇಲ್ಲಿದೆ ನೋಡಿ.

ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬಾಬರ್‌ನ್ನು ಮೊದಲ ಬಾರಿಗೆ ಬುಲೆಟೀರ್ ಕಸ್ಟಮ್ಸ್ ಆರು ತಿಂಗಳ ಹಿಂದೆ ರಾಯಲ್ ಎನ್‌ಫೀಲ್ಡ್ ಉನ್ಮಾದದಲ್ಲಿ ಪ್ರದರ್ಶಿಸಿತ್ತು. ಇದು ಆಧುನಿಕ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಾಯಲ್ ಎನ್‌ಫೀಲ್ಡ್‌ನ ಮೂಲ ಚಾಸಿಸ್ ಹೊಂದಿರುವ ಕಸ್ಟಮ್ ಮೋಟಾರ್‌ಸೈಕಲ್ ಆಗಿದೆ.
ಈ ಮೋಟಾರ್‌ಸೈಕಲ್‌ ಎಲೆಕ್ಟ್ರಿಕ್ ಆಗಿದೆ. ಕ್ರೋಮ್ ಫಿನಿಶ್ ಫಿನ್‌ಗಳೊಂದಿಗೆ ದೊಡ್ಡ ಎಂಜಿನ್ ಅನ್ನು ಹೋಲುವಂತೆ ಬ್ಯಾಟರಿ ಕವರ್ ಅನ್ನು ಕಸ್ಟಮ್ ಮಾಡಲಾಗಿದೆ. ಬುಲೆಟೇರಿ ಕಸ್ಟಮ್ಸ್ ಸಂಸ್ಥೆಯ ರಿಕಿ ಈ ಪ್ರಾಜೆಕ್ಟ್‌ನ್ನು ಒಂದು ವಾರದೊಳಗೆ ಪೂರ್ಣಗೊಳಿಸಿದ್ದಾರೆ. ಕ್ಯಾಂಡಿ ಕೆಂಪು ಫಿನಿಶ್‌ನೊಂದಿಗೆ ಮೂಲ ಚಾಸಿಸ್‌ನಲ್ಲಿ ದೊಡ್ಡ ಬ್ಯಾಟರಿ ಪ್ಯಾಕ್ ಇದೆ. ಅಲ್ಲಿ ಈ ಮೊದಲು ಎಂಜಿನ್ ಇತ್ತು. ಬ್ಯಾಟರಿ ಮತ್ತು ಮೋಟಾರ್ ನಿಯಂತ್ರಕ ಅದರ ಇಂಧನದ ಟ್ಯಾಂಕ್‌ನಲ್ಲಿ ಅಳವಡಿಸಲಾಗಿದೆ. 5 ಕಿಲೋ ವ್ಯಾಟ್ ಹಿಂಭಾಗದ ಹಬ್ ಮೋಟಾರ್ ಈ ವಾಹನವನ್ನು ಓಡಿಸುತ್ತದೆ.

ಇದರ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಮಾಡಲು 6 ಗಂಟೆಗಳನ್ನು ಬೇಕಾಗುತ್ತದೆ. ಮತ್ತು ಪ್ರತಿ ಚಾರ್ಜ್‌ಗೆ 90 ಕಿಮೀ ಓಡಿಸುವ ಸಾಮರ್ಥ್ಯ ಇರಲಿದೆ.
ಇದು ಎಲೆಕ್ಟ್ರಿಕ್ ಆಗಿರುವುದರಿಂದ, ಇದು ರಿವರ್ಸ್ ಫಂಕ್ಷನ್ ಅನ್ನು ಸಹ ಹೊಂದಿದೆ. ಗಟ್ಟಿಯಾದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಚಕ್ರಗಳು, ಎರಡೂ ತುದಿಗಳಲ್ಲಿ ಸಿಂಗಲ್ ಡಿಸ್ಕ್ ಸೆಟಪ್‌ಗಳು, ಕಸ್ಟಮ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಘಟಕ, ಫ್ಯಾಟ್ ಟೈರ್‌ಗಳು, ರೌಂಡ್ ಹೆಡ್‌ಲೈಟ್‌ಗಳು ಇದರ ಲುಕ್ ಅನ್ನು ಹೆಚ್ಚಿಸಿದೆ.

ಇನ್ನು ಈ ಬೈಕ್ ರೈಡಿಂಗ್ ಭಂಗಿಯು ಹಾರ್ಲೆ-ಡೇವಿಡ್ಸನ್ ಸ್ಟ್ರೀಟ್ ರಾಡ್ 750 ಅನ್ನು ನೆನಪಿಸುವಂತಿದೆ. ಹಳೆಯ ಬುಲೆಟ್ ಹೊಂದಿರುವ ಗ್ರಾಹಕರಿಗೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬಾಬರ್ ಅನ್ನು ಮರುಸೃಷ್ಟಿಸಲು ಎಷ್ಟು ವೆಚ್ಚವಾಗುತ್ತದೆ ಎಂದು ಕೇಳಿದಾಗ ರಿಕಿ ಅವರು ಬ್ಯಾಟರಿ ಗಾತ್ರ ಮತ್ತು ಮೋಟಾರ್ ಶಕ್ತಿಯಲ್ಲಿ ಬಹು ಆಯ್ಕೆಗಳಿರುತ್ತವೆ. ಅದರ ಮೇಲೆ ವೆಚ್ಚ ಡಿಪೆಂಡ್ ಆಗುತ್ತೆ ಎಂದಿದ್ದಾರೆ. ಆದರೆ ಸುಮಾರು ವಾಹನಗಳ ವೆಚ್ಚವನ್ನು ಹೊರತುಪಡಿಸಿ, 3 ಲಕ್ಷದಿಂದ 3.5 ಲಕ್ಷದವರೆಗಿನ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read