ಪುತ್ರನಿಗೆ ದುಬಾರಿ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಉಡುಗೊರೆ ನೀಡಿದ ಭಾರತೀಯ ಉದ್ಯಮಿ | Watch Video

ಶ್ರೀಮಂತರು ತಮ್ಮ ಮಕ್ಕಳಿಗೆ ಕೋಟಿಗಟ್ಟಲೆ ಬೆಲೆಯ ವಾಹನಗಳನ್ನು ಉಡುಗೊರೆಯಾಗಿ ನೀಡುವುದು ಸಾಮಾನ್ಯ. ಆದರೆ, ಯುಎಇ ಮೂಲದ ANAX ಹೋಲ್ಡಿಂಗ್‌ನ ಅಧ್ಯಕ್ಷರಾದ ಭಾರತೀಯ ಮೂಲದ ಸತೀಶ್ ಸಂಪಾಲ್ ಅವರು ತಮ್ಮ ಪುತ್ರನಿಗೆ ನೀಡಿದ ಉಡುಗೊರೆ ಇದೀಗ ಸುದ್ದಿಯಾಗಿದೆ. ಅವರು ತಮ್ಮ ಪುತ್ರ ಲಕ್ಷ್ಯ ಸಂಪಾಲ್ ಅವರಿಗೆ 2025ರ ಮಾಡೆಲ್‌ನ ಅತ್ಯಂತ ದುಬಾರಿ ಮತ್ತು ಅಪರೂಪದ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಉಡುಗೊರೆಯ ಮೂಲಕ ಲಕ್ಷ್ಯ ಸಂಪಾಲ್, ಯುಎಇನಲ್ಲಿ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಒಡೆತನ ಹೊಂದಿರುವ ಅತಿ ಕಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಬಿಳಿ ಬಣ್ಣದ ಈ ಐಷಾರಾಮಿ ಎಸ್‌ಯುವಿಯ ವಿತರಣೆಯ ವಿಡಿಯೋವನ್ನು ಸತೀಶ್ ಸಂಪಾಲ್ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.

ಲಕ್ಷ್ಯ ಅವರ ಹೊಸ ಎಸ್‌ಯುವಿ ವಿಶಿಷ್ಟವಾದ ನಿಯಾನ್ ಹಸಿರು ಒಳಾಂಗಣವನ್ನು ಹೊಂದಿದ್ದು, ಹೆಡ್‌ರೆಸ್ಟ್‌ಗಳ ಮೇಲೆ ಅವರ ಮೊದಲಕ್ಷರಗಳನ್ನು ಕಸ್ಟಮೈಸ್ ಮಾಡಲಾಗಿದೆ. ವಿತರಣಾ ಸಮಾರಂಭದ ವಿಡಿಯೋದಲ್ಲಿ, ಸತೀಶ್ ಸಂಪಾಲ್ ಕಾರಿನ ಕೀಗಳನ್ನು ಸ್ವೀಕರಿಸುವುದು ಮತ್ತು ತಂದೆ-ಮಗ ಇಬ್ಬರೂ ಕಾರನ್ನು ಪರಿಶೀಲಿಸುವುದು ಕಂಡುಬರುತ್ತದೆ.

ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಭಾರತದಲ್ಲಿ ಸುಮಾರು 10.5 ಕೋಟಿ ರೂ. (ಎಕ್ಸ್-ಶೋರೂಮ್) ಬೆಲೆ ಬಾಳುತ್ತದೆ. ಆದರೆ, ಯುಎಇಯಲ್ಲಿ ಕಾರುಗಳು ಅಗ್ಗವಾಗಿರುವುದರಿಂದ, ಕಸ್ಟಮೈಸೇಶನ್ ಸೇರಿದಂತೆ ಸತೀಶ್ ಸಂಪಾಲ್ ಅವರಿಗೆ ಕಡಿಮೆ ವೆಚ್ಚವಾಗಿರಬಹುದು. ಈ ಕಾರು 6.75-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ12 ಎಂಜಿನ್ ಹೊಂದಿದ್ದು, 600 PS ಮತ್ತು 900 Nm ಟಾರ್ಕ್ ಉತ್ಪಾದಿಸುತ್ತದೆ. ಸತೀಶ್ ಸಂಪಾಲ್ ಸ್ವತಃ ರೋಲ್ಸ್ ರಾಯ್ಸ್ ಕಲಿನನ್, ಲಂಬೋರ್ಘಿನಿ ಅವೆಂಟಡಾರ್, ಫೆರಾರಿ ಮತ್ತು ಬುಗಾಟ್ಟಿ ಕೈರೊನ್ ಹೈಪರ್‌ಕಾರ್ ಸೇರಿದಂತೆ ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read