ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯ-ಇಡಿ ಅಧಿಕಾರಿಗಳು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಪತಿ, ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಯುಕೆ ಮೂಲದ ರಕ್ಷಣಾ ಡೀಲರ್ ಸಂಜಯ್ ಭಂಡಾರಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕ್ರಣದಲ್ಲಿ ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಇಡಿ ಅಧಿಕಾರಿರಿಗಳು ಹೊಸ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ದೆಹಲಿಯ ರೌಸ್ ಅವೆನ್ಯೂ ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಕಳೆದ ಜುಲೈನಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇಡಿ ಅಧಿಕಾರಿಗಳು ರಾಬರ್ಟ್ ವಾದ್ರಾ ಹೇಳಿಕೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ವಾದ್ರಾ ಒಂಭತ್ತನೇ ಆರೋಪಿಯಾಗಿದ್ದಾರೆ. ಸಂಜಯ್ ಭಂಡಾರಿ, ಸುಮಿತ್ ಚಡ್ಯಾ, ಸಂಜೀವ್ ಕಪೂರ್, ಅನಿರುದ್ಧ ವಾಧ್ವಾ, ಸ್ಯಾಂಟೆಕ್ ಇಂಟರ್ ನ್ಯಾಷನಲ್ ಎಫ್ ಜೆಡ್ ಸಿ, ಆಫ್ ಸೆಟ್ ಇಂಡಿಯಾ ಸೊಲ್ಯೂಷನ್, ಶ್ಯಾಮ್ಲಾನ್ ಗ್ರೋಸ್-1 ಇಂಕ್, ಚರುವತ್ತೂರ್ ಚೆಕ್ಕುಟ್ಟಿ ಥೆಂಪಿ ಅವರನ್ನು ಆರೋಪಿಗಳೆಂದು ಪರಿಗಣಿಸಲಾಗಿದೆ.
