ಧಾರವಾಡ : ಸಿಎಂ ಸಿದ್ದರಾಮಯ್ಯರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಫಾರ್ಮ್ ಹೌಸ್ ನಲ್ಲಿ ದರೋಡೆ ನಡೆದಿದ್ದು, 15ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ತಾಲೂಕಿನ ದಡ್ಡಿಕಮಲಾಪುರ ಗ್ರಾಮದ ಬಳಿ ಬಸವರಾಜ ರಾಯರೆಡ್ಡಿ ಅವರ ಮಮತಾ ಎಂಬ ಫಾರ್ಮ್ ಹೌಸ್ ಗೆ ನುಗ್ಗಿದ್ದಾರೆ.
ಆ.13 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 8-10 ಜನರ ಗುಂಪು ಫಾರ್ಮ್ಹೌಸ್ಗೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಿಗೆ ಹೆದರಿಸಿ ಚಾಕು ತೋರಿಸಿ ಅವರ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಅವರ ಬಳಿ ಇದ್ದ ಮೊಬೈಲ್ ಫೋನ್ ಹಾಗೂ ಇತರ ವಸ್ತುಗಳನ್ನ ದರೋಡೆ ಮಾಡಿದ್ದಾರೆ. ನಂತರ ಪೊಲೀಸರು ದರೋಡೆಕೋರರ ಬಂಧನಕ್ಕೆ ಒಟ್ಟು 8 ತಂಡಗಳನ್ನು ರಚಿಸಿದ್ದರು. ಕೊನೆಗೆ 15 ಜನ ಆರೋಪಿಗಳನ್ನ ಬಂಧಿಸಿದ್ದು, ಬಳಿಕ ವಿಚಾರಣೆ ನಡೆಸಿದಾಗ ಅವರೇ ದರೋಡೆ ಮಾಡಿದ್ದು ಎಂದು ಗೊತ್ತಾಗಿದೆ.
You Might Also Like
TAGGED:ರಾಯರೆಡ್ಡಿ