ದಾವಣಗೆರೆ: ಚಿನ್ನದ ಸಾಲ ರಿನಿವಲ್ ಮಾಡಲು ಬಂದಿದ್ದ ವೇಳೆಯಲ್ಲಿ ಬ್ಯಾಂಕ್ ನಲ್ಲೇ ಮಹಿಳೆಯೊಬ್ಬರ ಹಣ ದೋಚಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಂತೆಬೆನ್ನೂರು ಕೆನರಾ ಬ್ಯಾಂಕ್ ನಲ್ಲಿ ನಡೆದಿದೆ.
ತಣಿಗೆರೆ ಗ್ರಾಮದ ಲತಾ ಅವರು ಚಿನ್ನದ ಸಾಲ ನವೀಕರಣಕ್ಕೆ ಬಂದಿದ್ದ ವೇಳೆ ಪೆನ್ ನೀಡುವ ನೆಪದಲ್ಲಿ ಲತಾ ಅವರ ಬಳಿ ಬಂದ ಮಹಿಳೆಯರು ಮೂರುವರೆ ಲಕ್ಷ ಹಣ ಎಗರಿಸಿದ್ದಾರೆ. ಕಳ್ಳಿಯರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹಣ ಕಳುವಾಗಿರುವುದನ್ನು ಅರಿತ ಲತಾ ದಂಪತಿ ಕೂಡಲೇ ಬ್ಯಾಂಕ್ ನಿಂದ ಪರಾರಿಯಾಗುತ್ತಿದ್ದ ಕಳ್ಳರನ್ನು ಕೂಗಿ ಹಿಡಿದಿದ್ದಾರೆ. ಅವರ ಬಳಿ ಇದ್ದ ಎರಡೂವರೆ ಲಕ್ಷ ರೂಪಾಯಿ ಹಣ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಮತ್ತೊಬ್ಬ ಕಳ್ಳಿ ಒಂದು ಲಕ್ಷ ರೂಪಾಯಿ ಸಮೇತ ಪರಾರಿಯಾಗಿದ್ದಾಳೆ. ಸಂತೆಬೆನ್ನೂರು ಠಾಣೆ ಪೊಲೀಸರು ಇಬ್ಬರು ಮಹಿಳೆಯರ ವಿಚಾರಣೆ ನಡೆಸಿದ್ದು, 1 ಲಕ್ಷ ರೂ. ಸಮೇತ ಪರಾರಿಯಾದ ಕಳ್ಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.