ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ತ್ಯಾಜ್ಯ: ಏನು ನೀಡುತ್ತೇವೋ ಅದೇ ಪಡೆಯುತ್ತೇವೆಂದ ನೆಟ್ಟಿಗರು…!

ಉತ್ತರ ಭಾರತದಲ್ಲಿ ನೆರೆ ಹಾವಳಿ ಮಿತಿಮೀರಿದೆ. ಈ ಸಂಬಂಧ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಪ್ರವಾಹದ ಹೊಡೆತಕ್ಕೆ ಪ್ಲಾಸ್ಟಿಕ್​ ಬಾಟಲಿಗಳು ಸೇರಿದಂತೆ ವಿವಿಧ ಅವಶೇಷಗಳಿಂದ ಕೂಡಿದ ಸೇತುವೆಯೊಂದು ಕೊಚ್ಚಿಕೊಂಡು ಬಂದಿದೆ. ಭಾರತೀಯ ಅರಣ್ಯಾಧಿಕಾರಿ ಪರ್ವಿನ್​​ ಕಸ್ವಾನ್​ ಟ್ವಿಟರ್​ನಲ್ಲಿ ಈ ವಿಡಿಯೋ ಶೇರ್​ ಮಾಡಿದ್ದಾರೆ.

ಪರ್ವೀನ್ ಕಸ್ವಾನ್ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಅವಶೇಷಗಳಿಂದ ತುಂಬಿದ ಸೇತುವೆಯನ್ನು ಕಾಣಬಹುದಾಗಿದೆ. ಪ್ರವಾಹಕ್ಕೆ ಒಳಗಾದ ನದಿಯಿಂದ ಇದು ಕೊಚ್ಚಿಕೊಂಡು ಬಂದಿರುವಂತೆ ಕಾಣುತ್ತಿದೆ. ಪ್ರಕೃತಿ – 1 ಮನುಷ್ಯ – 0. ನಾವು ಎಸೆದ ಕಸವನ್ನು ನದಿಯು ನಮಗೆ ಮರಳಿ ನೀಡಿದೆ. ನಾವು ಏನು ಕೊಡುತ್ತೇವೆಯೋ ಅದನ್ನೇ ಪಡೆಯುತ್ತೇವೆ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಇನ್ನು ಕೆಲವರು ಈ ವಿಡಿಯೋ ಹಳೆಯದು ಎಂದು ಸಹ ಪ್ರತಿಪಾದಿಸಿದ್ದಾರೆ. ಅದೇನೆ ಇರ್ಲಿ ಪ್ರಕೃತಿಯ ಮುಂದೆ ಮನುಷ್ಯ ತಾನೇ ದೊಡ್ಡವ ಎಂದು ಮೆರೆದಾಡುತ್ತಾನೆ. ಆದರೆ ಪ್ರಕೃತಿಯು ತಿರುಗಿ ನಿಂತರೆ ಮಾನವ ಅದರ ಮುಂದೆ ಶೂನ್ಯ ಅನ್ನೋದು ಅಷ್ಟೇ ಸತ್ಯ.

https://twitter.com/modynishant/status/1678995629899497474

 

https://twitter.com/AJM2199/status/1678876222636343298

 

https://twitter.com/i/status/1678796477517144069

https://twitter.com/SaveNammaPBC/status/1679018433034481665

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read