Viral Video | ಪಿ.ವಿ. ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ನಟ ರಿತೇಶ್ ದೇಶ್‌ಮುಖ್

ನಟ ರಿತೇಶ್ ದೇಶ್‌ಮುಖ್ ಅವರು ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡು ಕೊಂಚ ಆಟವಾಡಿ ಎಲ್ಲರನ್ನೂ ರಂಜಿಸಿದ್ರು.

ಹಿಂದೂಸ್ತಾನ್ ಟೈಮ್ಸ್ ಇಂಡಿಯಾದ ಮೋಸ್ಟ್ ಸ್ಟೈಲಿಶ್ ಅವಾರ್ಡ್ಸ್ 2023 ರಲ್ಲಿ ಸಿಂಧು ಅವರ ಜೊತೆ ಶಟಲ್ ಆಟವನ್ನು ಆಡಿದರು. ರಿತೇಶ್ ಅವರ ಪತ್ನಿ, ನಟಿ ಜೆನಿಲಿಯಾ ಡಿಸೋಜಾ ಅವರೊಂದಿಗೆ ಕಾರ್ಯಕ್ರಮವನ್ನು ನಡೆಸಿದ್ರು.

ಈ ವೇಳೆ ಜಿತೇಂದ್ರ ಮತ್ತು ಲೀನಾ ಚಂದಾವರ್ಕರ್ ಅವರ ಬಾಲಿವುಡ್ ಹಾಡು ಧಲ್ ಗಯಾ ದಿನ್ ಹೋ ಗಯಿ ಶಾಮ್ ಗೀತೆಯನ್ನು ನುಡಿಸಲಾಯಿತು.

ರಿತೇಶ್ ದೇಶ್‌ಮುಖ್ ಆಟವನ್ನು ಚುರುಕುಗೊಳಿಸಿ ಎಲ್ಲರನ್ನೂ ಆಕರ್ಷಿಸಿದರು. ಇವರಿಬ್ಬರ ಈ ಮನೋರಂಜನೆಯ ಆಟ ನೆರೆದವರನ್ನು ಸಂತೋಷಪಡಿಸಿತು. ಪಿವಿ ಸಿಂಧು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಾವು ಮತ್ತು ರಿತೇಶ್ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನಟನನ್ನು ಟ್ಯಾಗ್ ಮಾಡಿ, ನಿಜಕ್ಕೂ ನೀವು ಅದ್ಭುತ ಎಂದು ಬರೆದಿದ್ದಾರೆ. ರಿತೇಶ್ ಕೂಡ, ನೀವು ತುಂಬಾ ಕರುಣಾಮಯಿ ಅಲ್ಲದೆ ನಿಮ್ಮೆಲ್ಲಾ ಸಾಧನೆಗಳ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ ಎಂದು ಬರೆದಿದ್ದಾರೆ.

ನಟ ರಿತೇಶ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಸುಂದರ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಳೆದ ರಾತ್ರಿ, ಸ್ಟೈಲಿಶ್ ವಿಶ್ವ ಚಾಂಪಿಯನ್ ಮತ್ತು ಭಾರತದ ಹೆಮ್ಮೆ ಪಿವಿ ಸಿಂಧು ಅವರೊಂದಿಗೆ ಬ್ಯಾಡ್ಮಿಂಟನ್ ಆಡಿದ್ದು ಖುಷಿ ನೀಡಿದೆ ಎಂದು ಹೇಳಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read