ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಏರುಗತಿಯಲ್ಲಿ ಸಾಗಿದ್ದು ನಿಸರ್ಗ ಸಹಜವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದ. ಆದರೆ ಮುಂಚಿತವಾಗಿ ಕುಡಿಯುವ ನೀರಿನ ಕೊರತೆಯಾಗದಂತೆ ಕಾರ್ಯಸೂಚಿ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜನತೆಗೆ ಕುಡಿಯುವ ನೀರನ್ನು ಒದಗಿಸುವುದು ನಮ್ಮ ಪ್ರಥಮ ಆದ್ಯತೆಯಾಗಿರಬೇಕು.ಜಾನುವಾರುಗಳಿಗೆ ನೀರು ಮತ್ತು ಮೇವು ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕುಅಗತ್ಯ ಇರುವ ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಬೇಕು ಹಾಗೂ ಜಲ ಮೂಲಗಳನ್ನು ಸಿದ್ದಗೊಳಿಸಿರಬೇಕು.
ಬಾಡಿಗೆ ಆಧಾರದ ಮೇಲೆ ಖಾಸಗಿ ಬೋರ್ ವೆಲ್ ಗಳನ್ನು ಪಡೆಯಲಾಗಿದೆ. ಹಾಗೂ ಸರ್ಕಾರದ ಬೋರ್ ವೆಲ್ ಗಳನ್ನು ಫ್ಲಷ್ ಮಾಡುವ ಮೂಲಕ ಸುಲಭವಾಗಿ ನೀರು ಮೇಲೆತ್ತಲು ಕ್ರಮವಹಿಸಲಾಗುತ್ತಿದೆ, ಈ ಎಲ್ಲಾ ಸಿದ್ಧತೆಗಳು ಇನ್ನಷ್ಟು ಚುರುಕುಗೊಳಿಸಬೇಕು.ನೀರಿನ ಹಿತ ಮಿತವಾದ ಬಳಕೆ, ಜಲ ಮೂಲಗಳ ಸಂರಕ್ಷಣೆ, ಸುಸ್ಥಿರ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವ ಮೂಲಕ ಬೇಸಿಗೆಯ ಬರವನ್ನು ಎದುರಿಸಬಹುದು.ಜನತೆಗೆ ನೀರನ್ನು ಒದಗಿಸುವುದು ಸರ್ಕಾರದ ಆದ್ಯತೆ, ನೀರಿನ ಜವಾಬ್ದಾರಿಯುತ ಬಳಕೆ ಜನರ ಜವಾಬ್ದಾರಿ. ಜೀವ ಜಲದ ಬಗ್ಗೆ ನಾವೆಲ್ಲರೂ ಹೊಣೆಗಾರಿಕೆಯಿಂದ ನಡೆದುಕೊಳ್ಳುವುದು ಇಂದಿನ ಅಗತ್ಯ ಎಂದು ಹೇಳಿದ್ದಾರೆ.