BIG NEWS: ಚರ್ಚೆಗೆ ಕಾರಣವಾಯ್ತು ನಟ ರಿಷಬ್ ಶೆಟ್ಟಿ ಹೇಳಿಕೆ

ಬೆಂಗಳೂರು: ‘ಕಾಂತಾರಾ’ ಸಿನಿಮಾದಲ್ಲಿ ಅಧ್ಭುತ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ನಟ ರಿಷಬ್ ಶೆಟ್ಟಿ ನೀಡಿರುವ ಹೇಳಿಕೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

‘ಲಾಫಿಂಗ್ ಬುದ್ಧ’ ಸಿನಿಮಾದ ಪ್ರಚಾರದ ವೇಳೆ ಬಾಲಿವುಡ್ ಸಿನಿಮಗಳ ಬಗ್ಗೆ ನಟ ರಿಷಬ್ ಶೆಟ್ಟಿ ಆಡಿರುವ ಮಾತುಗಳು ಕೆಲ ಚರ್ಚೆಗಳನ್ನು ಹುಟ್ಟುಹಾಕಿದೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಪ್ರಮೋದ್ ಶೆಟ್ಟಿ ಅಭಿನಯದಲ್ಲಿ ಮೂಡಿಬರುತ್ತಿರುವ ‘ಲಾಫಿಂಗ್ ಬುದ್ಧ’ ಚಿತ್ರದ ಪ್ರಮೋಷನ್ ಹಾಗೂ ಪ್ರಚಾರದ ವೇಳೆ ಮಾತನಾಡಿದ ರಿಷಬ್ ಶೆಟ್ಟಿ, ಬಾಲಿವುಡ್ ನವರು ಸಿನಿಮಾ ಮಾಡುವುದಕ್ಕೂ, ದಕ್ಷಿಣ ಭಾರತದವರು ಸಿನಿಮಾ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಬಾಲಿವುಡ್ ಸಿನಿಮಾಗಳಲ್ಲಿ ಭಾರತವನ್ನು ಕೆಟ್ಟದಾಗಿ ತೋರಿಸಲಾಗುತ್ತದೆ. ಇದೇ ಸಿನಿಮಾ ಮಾಡುವ ಆರ್ಟ್ಸ್ ಎಂದುಕೊಂಡು ಹೊರದೆಶಗಳಿಗೆ ಹೋಗಿ ಅವಾರ್ಡ್ ಗಳನ್ನು ಗೆದ್ದು ಬಂದಿದ್ದನ್ನೂ ನೋಡಿದ್ದೇವೆ ಎಂದಿದ್ದಾರೆ.

ನಮ್ಮ ದೇಶ ನಮ್ಮ ಹೆಮ್ಮೆ, ನನ್ನ ರಾಜ್ಯ, ನನ್ನ ಹೆಮ್ಮೆ, ನನ್ನ ಭಾಷೆ, ನನ್ನ ಹೆಮ್ಮೆ. ನಮ್ಮಲ್ಲಿರುವುದನ್ನು ಪಾಸಿಟಿವ್ ನೋಟ್ ನಲ್ಲಿ ತೋರಿಸಬಹುದಲ್ಲ ಎಂದು ಹೇಳಿದ್ದಾರೆ.

ಇದೀಗ ನಟ ರಿಷಬ್ ಶೆಟ್ಟಿ ಹೇಳಿಕೆ ಭಾರಿ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಹಲವರು ರಿಷಬ್ ಹೇಳಿಕೆ ಸರಿಯಿದೆ ಎಂದರೆ ಇನ್ನು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read