ಸ್ಯಾಮ್​ಸಂಗ್​ ಎಸ್.​ಎಸ್.ಡಿ.ನಾ ? ರಿನ್​ ಸೋಪಾ ? ನೆಟ್ಟಿಗರು ಫುಲ್​ ಕನ್​ಫ್ಯೂಸ್​

ಸ್ಯಾಮ್​ಸಂಗ್​ ಟಿ 7 ಹೊಸ ಎಸ್​ಎಸ್​ ಡಿ ಯನ್ನು ಮಾರುಕಟ್ಟೆಗೆ ಪರಿಚಯಸಿದ್ದು, ಇದೀಗ ತನ್ನ ವಿಶಿಷ್ಟ ಬಗೆಯಿಂದಾಗಿ ಸುದ್ದಿಯಾಗಿದೆ. ಡೇಟಾ ಸಂಗ್ರಹಣೆಗೆ ವಿಶಾಲವಾದ ಸ್ಥಳಾವಕಾಶ ಇರುವ ಈ ಎಸ್​ಎಸ್​ ಡಿ ಈಗ ಸುದ್ದಿಯಲ್ಲಿ ಇರಲು ಕಾರಣವೇನೆಂದರೆ ಅದು ಕಾಣಿಸುವ ವಿಶಿಷ್ಟ ಬಗೆಯಿಂದಾಗಿದೆ.

ಈ ಕುರಿತು ಸ್ಯಾಮ್​ಸಂಗ್ ಇಂಡಿಯಾ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಈ ಎಸ್​ಎಸ್ ​ಡಿ ಯನ್ನು ನೋಡಿ ನೆಟ್ಟಿಗರು ಅಚ್ಚರಿಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣ ಈ ಎಸ್.​ಎಸ್.​ಡಿ.ಯು ರಿನ್​ ಸೋಪಿನ ರೀತಿಯಲ್ಲಿ ಕಾಣಿಸುತ್ತದೆ.

ಒಮ್ಮೆಲೆ ನೋಡಿದರೆ ರಿನ್​ ಸೋಪಿನಂತೆ ಕಾಣಿಸಿರುವ ಈ ಎಸ್.​ಎಸ್.​ಡಿ.ಯನ್ನು ನೋಡಿ ಜನರು ಆಶ್ಚರ್ಯಚಕಿತರಾಗಿದ್ದಾರೆ. ಇದು ಸ್ಯಾಮ್​ಸಂಗ್​ ಎಸ್​ಎಸ್​ಡಿಯೋ ಅಥವಾ ರಿನ್​ ಸೋಪಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಸ್ಯಾಮ್​ಸಂಗ್​ನ ಈ ಉತ್ಪನ್ನವು ಕಡು ನೀಲಿ ಬಣ್ಣದ್ದಾಗಿದೆ, ನೋಡಲು ಥೇಟ್​ ರಿನ್​ ಸೋಪಿನ ರೀತಿಯಲ್ಲಿ ಕಾಣಿಸುತ್ತದೆ. ಕೆಲವರು ಇದನ್ನು ರಿನ್​ ಸೋಪ್​ ಎಂದಿದ್ದರೆ, ಕೆಲವರು ಸರ್ಫ್ ಎಕ್ಸೆಲ್ ಎಂದಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ತಮಾಷೆಯ ಕಮೆಂಟ್ಸ್​ಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇದು ನೆಟ್ಟಿಗರನ್ನು ವಿವಿಧ ರೀತಿಯಲ್ಲಿ ಯೋಚಿಸುವಂತೆ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read