ಮೈಸೂರು: ಸರ್ಕಾರ ಇ-ಚಲನ್ ಟ್ರಾಫಿಕ್ ದಂಡ ಪಾವತಿಗೆ ಶೇಕಡ 50ರಷ್ಟು ರಿಯಾಯಿತಿ ನೀಡಿದ ಮೊದಲ ದಿನವೇ ಮೈಸೂರಿನಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ಬರೋಬ್ಬರಿ 36,000 ರೂ. ದಂಡ ಪಾವತಿಸಿದ್ದಾರೆ.
ಮೈಸೂರು ನಗರದ ನಿವಾಸಿಯೊಬ್ಬರ ಸ್ಕೂಟರ್ ವಿರುದ್ಧ 78 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 72,000 ರೂ. ದಂಡ ವಿಧಿಸಲಾಗಿತ್ತು. ಸ್ವಯಂ ಪ್ರೇರಿತವಾಗಿ ದಂಡಪಾವತಿಗೆ ಬಂದ ಸವಾರ 36,000 ರೂ. ದಂಡ ಪಾವತಿಸಿ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.
ರಾಜ್ಯ ಸರ್ಕಾರ ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರ ವರೆಗೆ ಅರ್ಧದಷ್ಟು ದಂಡ ಪಾವತಿ ಪ್ರಕರಣ ಇತ್ಯರ್ಥಕ್ಕೆ ಅವಕಾಶ ಕಲ್ಪಿಸಿದೆ. ಈ ಸ್ಕೂಟಿ ಸವಾರನ ವಿರುದ್ಧ 72 ಸಾವಿರ ರೂ. ದಂಡ ಬಾಕಿ ಇತ್ತು.