ನವದೆಹಲಿ: ವಿಚಿತ್ರ ಘಟನೆಯೊಂದರಲ್ಲಿ, ಟ್ವಿಟ್ಟರ್ ಬಳಕೆದಾರರಾದ ಅನುಷ್ಕಾ ಎನ್ನುವವರು ದೆಹಲಿಯ ಆಟೋ ಡ್ರೈವರ್ ಒಬ್ಬರಿಂದ ಭಾರತದ ನಾಣ್ಯದ ಬದಲಾಗಿ ಯೂರೋ ನಾಣ್ಯವನ್ನು ಪಡೆದುಕೊಂಡಿರುವ ಬಗ್ಗೆ ಬರೆದುಕೊಂಡಿದ್ದಾರೆ.
ಆಟೋ ಡ್ರೈವರ್ ನನಗೆ ಐದು ರೂಪಾಯಿ ನಾಣ್ಯ ನೀಡಬೇಕಿತ್ತು. ಅದಕ್ಕೆ ಬದಲಾಗಿ ಒಂದು ಯುರೋ ನಾಣ್ಯ ಕೊಟ್ಟಿದ್ದು, ಅದನ್ನು ತಾವು ನಂತರದಲ್ಲಿ ಗಮನಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಇದು ತುಂಬಾ ವಿಚಿತ್ರವಾಗಿದೆ. ಆಟೋ ಡ್ರೈವರ್ ತಿಳಿದು ಕೊಟ್ಟರೋ, ತಿಳಿಯದೇ ಕೊಟ್ಟರೋ ನನಗೆ ಗೊತ್ತಿಲ್ಲ. ನಾನು ಮೊದಲು ಅದನ್ನು ಗಮನಿಸಿರಲಿಲ್ಲ. ಐದು ರೂಪಾಯಿ ಕಾಯಿನ್ ಇರಬಹುದು ಎಂದು ಪರ್ಸ್ನಲ್ಲಿ ಹಾಕಿಕೊಂಡಿದ್ದೆ. ನಂತರ ನೋಡಿದಾಗ ಅದು ಯೂರೋ ಆಗಿತ್ತು ಎಂದಿದ್ದಾರೆ.
ಇವರ ಈ ಟ್ವೀಟ್ಗೆ ತಮಾಷೆಯ ಪ್ರತಿಕ್ರಿಯೆಗಳು ಬರುತ್ತಿವೆ. ಇದೇ ದೇಶದ ವಿಕಾಸ ಎಂದು ಕೆಲವರು ಹೇಳಿದ್ದರೆ, ಇದು ‘ವಿಶ್ವಗುರು ನಡವಳಿಕೆ’ ಎಂದು ಇನ್ನು ಕೆಲವರು ಹೇಳಿದ್ದಾರೆ. ಒಬ್ಬಾಕೆ, ನಾನು ಕಳೆದ ತಿಂಗಳು ಭಾರತಕ್ಕೆ ಬಂದಿದ್ದಾಗ ಕೆಲವಷ್ಟು ಯೂರೋಗಳನ್ನು ಕಳೆದುಕೊಂಡಿದ್ದೆ. ಅದರಲ್ಲಿ ಒಂದು ಆಟೋ ಡ್ರೈವರ್ಗೆ ಸಿಕ್ಕಿರಬೇಕು ಎಂದು ತಮಾಷೆಯಾಗಿ ಬರೆದಿದ್ದಾರೆ.
I got a euro instead of a five rupee coin as change from the rickshaw wale uncle???????? pic.twitter.com/8VD4QwNy6E
— ._.🇵🇸 (@awolaxolotl) February 16, 2023