ರೇವ್ ಪಾರ್ಟಿ ನಡೆದಿದ್ದ ಜಾಗದಿಂದಲೇ ವಿಡಿಯೋ ಮಾಡಿದ ನಟಿ; ನಾನು ಹೈದರಾಬಾದ್ ಫಾರ್ಮ್ ಹೌಸ್ ನಲ್ಲಿದ್ದೇನೆ ಎನ್ನುತ್ತಲೇ ಪೊಲೀಸರಿಗೆ ಸಿಕ್ಕಿಬಿದ್ದ ನಟಿ

ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಟಾಲಿವುಡ್ ನಟಿ ಹೇಮಾ ಕೂಡ ಇದ್ದರು ಎಂಬ ವರದಿಯಾಗಿತ್ತು. ಆದರೆ ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿ ತಾನು ಬೆಂಗಳೂರಿನಲ್ಲಿ ಇಲ್ಲ, ಹೈದರಾಬಾದ್ ನ ಫಾರ್ಮ್ ಹೌಸ್ ನಲ್ಲಿ ಆರಾಮವಾಗಿದ್ದೇನೆ ಎಂದು ಮರಗಳ ಮುಂದೆ ನಿಂತು ಹೇಳಿಕೆಕೊಟ್ಟಿದ್ದರು. ಇದಾದ ಕೆಲವೇ ಸಮಯದಲ್ಲಿ ನಟಿ ಹೇಮಾ ರೆವ್ ಪಾರ್ಟಿ ನಡೆದಿದ್ದ ಬೆಂಗಳೂರಿನ ಅದೇ ಫಾರ್ಮ್ ಹೌಸ್ ನಲ್ಲಿ ಹೇಮಾ ಸಿಕ್ಕಿಬಿದ್ದಿದ್ದಾರೆ.

ರೇವ್ ಪಾರ್ಟಿ ನಡೆದ ಫಾರ್ಮ್ ಹೌಸ್ ನ ಆವರಣದಿಂದಲೇ ವಿಡಿಯೋ ಮಾಡಿ ತಾನು ಹೈದರಾಬಾದ್ ನ ಫಾರ್ಮ್ ಹೌಸ್ ನಲ್ಲಿದ್ದೇನೆ ಎಂದು ಸುಳ್ಳು ಹೇಳಿದ್ದಾರೆ ಎಂಬುದು ತಿಳಿದುಬಂದಿದೆ.

ಫಾರ್ಮ್ ಹೌಸ್ ನಲ್ಲಿ ಸಿಕ್ಕಿಬಿದ್ದ ಹೇಮಾ, ತಾವು ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಸ್ಥಳದಿಂದ ತೆರಳಿ ಬಳಿಕ ವಿಡಿಯೋ ಮಾಡಿ ತಾವು ಹೈದರಾಬಾದ್ ನಲ್ಲಿರುವುದಾಗಿ ಹೇಳಿದ್ದಾರೆ. ಅಲ್ಲದೇ ನನ್ನ ಬಗ್ಗೆ ಹಬ್ಬಿರುವ್ ಅಸುದ್ದಿ ಫೇಕ್ ಎಂದು ಹೇಳಿದ್ದರು.

ಆದರೆ ನಟಿ ಹೇಮಾ ಈಗಲೇ ಜಿಆರ್ ಫಾರ್ಮ್ ಹೌಸ್ ನಲ್ಲಿಯೇ ಇದ್ದು, ಆಕೆ ವಿಡಿಯೋ ಮಾಡಿರುವ ಸ್ಥಳವನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read