27 ವರ್ಷಗಳ ಹುಡುಕಾಟಕ್ಕೆ ʼಕುಂಭಮೇಳʼ ದಲ್ಲಿ ತೆರೆ; ನಾಪತ್ತೆಯಾಗಿದ್ದ ವ್ಯಕ್ತಿ ʼಅಘೋರಿʼ ಸಾಧುವಾಗಿ ಪತ್ತೆ……!

ಜಾರ್ಖಂಡ್ ಕುಟುಂಬವೊಂದು 27 ವರ್ಷಗಳಿಂದ ಕಳೆದುಹೋಗಿದ್ದ ತಮ್ಮ ಕುಟುಂಬ ಸದಸ್ಯನನ್ನು ಹುಡುಕುವ ನಿರಂತರ ಪ್ರಯತ್ನಕ್ಕೆ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಒಂದು ರೀತಿಯ ಅಂತ್ಯ ಸಿಕ್ಕಿದೆ, ಆದರೆ ಅನಿರೀಕ್ಷಿತ ತಿರುವುಗಳೊಂದಿಗೆ. 1998 ರಲ್ಲಿ ಕಾಣೆಯಾಗಿದ್ದ ಗಂಗಾಸಾಗರ್ ಯಾದವ್ ಈಗ 65 ವರ್ಷ ವಯಸ್ಸಿನ ಅಘೋರಿ ಸಾ̧ಧು ಬಾಬಾ ರಾಜಕುಮಾರ್ ಆಗಿ ಬದುಕುತ್ತಿದ್ದಾರೆ ಎನ್ನಲಾಗಿದೆ.

27 ವರ್ಷಗಳ ಹಿಂದೆ ಗಂಗಾಸಾಗರ್ ಪಾಟ್ನಾಗೆ ಪ್ರಯಾಣ ಬೆಳೆಸಿದ ನಂತರ ಕಾಣೆಯಾಗಿದ್ದು, ಅವರ ಪತ್ನಿ ಧನ್ವಾ ದೇವಿ ತಮ್ಮ ಇಬ್ಬರು ಪುತ್ರರನ್ನು ಒಬ್ಬಂಟಿಯಾಗಿ ಬೆಳೆಸುವಂತಾಯಿತು. ವರ್ಷಗಳು ಉರುಳಿದಂತೆ, ಕುಟುಂಬವು ಭರವಸೆಯನ್ನು ಕಳೆದುಕೊಂಡಿದ್ದರೂ ಗಂಗಾಸಾಗರ್ ಅವರನ್ನು ಹುಡುಕುವ ಪ್ರಯತ್ನವನ್ನು ನಿಲ್ಲಿಸಿರಲಿಲ್ಲ.

ಕುಂಭ ಮೇಳಕ್ಕೆ ಆಗಮಿಸಿದ್ದ ಸಂಬಂಧಿಯೊಬ್ಬರು ಗಂಗಾಸಾಗರ್ ಅವರನ್ನು ಹೋಲುವ ವ್ಯಕ್ತಿಯನ್ನು ಗುರುತಿಸಿ ಕುಟುಂಬಕ್ಕೆ ಫೋಟೋ ಕಳುಹಿಸಿದ್ದು, ಗಂಗಾಸಾಗರ್ ಅವರ ಕಿರಿಯ ಸಹೋದರ ಮುರಳಿ ಯಾದವ್, ಧನ್ವಾ ದೇವಿ ಮತ್ತು ಅವರ ಇಬ್ಬರು ಪುತ್ರರು ತಕ್ಷಣ ಕುಂಭ ಮೇಳಕ್ಕೆ ತೆರಳಿ ಅವರನ್ನು ಮರಳಿ ಕರೆತರಲು ನಿರ್ಧರಿಸಿದರು.

ಅಘೋರಿ ಸಾಧು ವೇಷದಲ್ಲಿದ್ದ ಬಾಬಾ ರಾಜಕುಮಾರ್ ತಮ್ಮ ಹಿಂದಿನ ಗುರುತನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು, ತಾವು ವಾರಣಾಸಿಯ ಸಾಧು ಎಂದು ಮತ್ತು ತಮ್ಮ ಹಿಂದಿನ ಜೀವನದ ಯಾವುದೇ ಸಂಬಂಧವನ್ನು ಒಪ್ಪಿಕೊಂಡಿಲ್ಲ.

ಸಾಧು ನಿರಾಕರಿಸಿದರೂ, ಕುಟುಂಬವು ತನ್ನ ನಂಬಿಕೆಯಲ್ಲಿ ದೃಢವಾಗಿದ್ದು, ಅವರ ಉದ್ದವಾದ ಹಲ್ಲುಗಳು, ಹಣೆ ಮೇಲಿನ ಹಳೆಯ ಗಾಯ ಮತ್ತು ಮೊಣಕಾಲಿನ ಮೇಲೆ ಕಲೆಯಂತಹ ವಿಶಿಷ್ಟ ಲಕ್ಷಣಗಳನ್ನು ಗುರುತಿಸಿ, 1998 ರಲ್ಲಿ ಕಣ್ಮರೆಯಾದ ಗಂಗಾಸಾಗರ್ ಎಂದೇ ದೃಢವಾಗಿ ನಂಬಿದ್ದಾರೆ. ತಮ್ಮ ಹಕ್ಕನ್ನು ಸಾಬೀತುಪಡಿಸಲು, ಗಂಗಾಸಾಗರ್ ಅವರ ಪತ್ನಿ, ಮುರಳಿ ಯಾದವ್ ಅವರೊಂದಿಗೆ ಕುಂಭಮೇಳ ಪೊಲೀಸರನ್ನು ಸಂಪರ್ಕಿಸಿ ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸಿದ್ದಾರೆ.

“ನಾವು ಕುಂಭ ಮೇಳದ ಅಂತ್ಯದವರೆಗೆ ಕಾಯುತ್ತೇವೆ ಮತ್ತು ಅಗತ್ಯವಿದ್ದರೆ, ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುತ್ತೇವೆ. ಪರೀಕ್ಷೆಯು ಹೊಂದಾಣಿಕೆಯಾಗದಿದ್ದರೆ, ನಾವು ಬಾಬಾ ರಾಜಕುಮಾರ್ ಅವರಿಗೆ ಕ್ಷಮೆಯಾಚಿಸುತ್ತೇವೆ,” ಎಂದು ಮುರಳಿ ಯಾದವ್ ಹೇಳಿದ್ದು, ಕೆಲವು ಕುಟುಂಬ ಸದಸ್ಯರು ಮನೆಗೆ ಮರಳಿದ್ದಾರೆ.

ಇತರರು ಮೇಳದಲ್ಲಿಯೇ ಇದ್ದು, ಬಾಬಾ ರಾಜಕುಮಾರ್ ಮತ್ತು ಅವರೊಂದಿಗಿರುವ ಸಾಧ್ವಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮೇಳವು ಮುಕ್ತಾಯಗೊಂಡ ನಂತರ, ಡಿಎನ್‌ಎ ಪರೀಕ್ಷೆಯು ಅವರು ಹೇಳುತ್ತಿರುವುದನ್ನು ಖಚಿತಪಡಿಸಿದರೆ ಅವರು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ.

ಗಂಗಾಸಾಗರ್ ಅವರ ಕಣ್ಮರೆಯು ಅವರ ಕುಟುಂಬವನ್ನು, ವಿಶೇಷವಾಗಿ ಅವರ ಪುಟ್ಟ ಮಕ್ಕಳನ್ನು ದುರಂತಕ್ಕೆ ತಳ್ಳಿತ್ತು. ಅವರ ಹಿರಿಯ ಮಗುವಿಗೆ ಆಗ ಕೇವಲ ಎರಡು ವರ್ಷ ವಯಸ್ಸಾಗಿದ್ದು, ಕಿರಿಯ ಮಗ ಇನ್ನೂ ಜನಿಸಿರಲಿಲ್ಲ. ಈ ದೀರ್ಘ ಮತ್ತು ಕಠಿಣ ಹುಡುಕಾಟವು ನಿಜವಾಗಿಯೂ ಕೊನೆಗೊಂಡಿದೆಯೇ ಎಂದು ಡಿಎನ್‌ಎ ಪರೀಕ್ಷೆಯ ಫಲಿತಾಂಶ ನಿರ್ಧರಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read