ಜ್ಯೂಸ್​ ಎಂದು ಹೋಟೆಲ್​ನಲ್ಲಿ ಸೋಪಿನ ನೀರು ಸಪ್ಲೈ: ಏಳು ಜನ ಆಸ್ಪತ್ರೆಗೆ ದಾಖಲು

ಚೀನಾ: ಪೂರ್ವ ಚೀನಾದ ರೆಸ್ಟೋರೆಂಟ್ ನಲ್ಲಿ ಹಣ್ಣಿನ ರಸದ ಬದಲಿಗೆ ಸೋಪಿನ ನೀರನ್ನು ನೀಡಲಾಗಿದೆ. ಇದನ್ನು ಕುಡಿದ ಏಳು ಗ್ರಾಹಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ ಘಟನೆಯು ಜನವರಿ 16 ರಂದು ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಸಂತ್ರಸ್ತ ಗ್ರಾಹಕರಲ್ಲಿ ಒಬ್ಬರಾದ ಸಿಸ್ಟರ್ ವುಕಾಂಗ್ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದಾಗ ಹಣ್ಣಿನ ರಸ ಎಂದು ತಪ್ಪಾಗಿ ಭಾವಿಸಿ ಸೋಪಿನ ನೀರಿನ ಬಾಟಲಿಯನ್ನು ತಂದಿದ್ದಾನೆ.

ಮಹಿಳೆ ವಿಡಿಯೋದಲ್ಲಿ ಇದರ ಬಗ್ಗೆ ಹೇಳಿಕೊಂಡಿದ್ದು, ನಂತರ ಅವರು ಸಾಮಾಜಿಕ ಮಾಧ್ಯಮದಿಂದ ಡಿಲೀಟ್​ ಮಾಡಿದ್ದಾರೆ. ಎಲ್ಲಾ ಏಳು ಜನರು ಸ್ಥಿರ ಸ್ಥಿತಿಯಲ್ಲಿದ್ದಾರೆ ಮತ್ತು ನಂತರ ರೆಸ್ಟೋರೆಂಟ್‌ನಿಂದ ಪರಿಹಾರವನ್ನು ಪಡೆಯಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ನಾವು ಏಳು ಮಂದಿ ಒಟ್ಟಿಗೆ ಊಟ ಮಾಡಿದೆವು. ಇದನ್ನು ಕುಡಿಯುತ್ತಲೇ ವಾಂತಿ ಬಂದ ಹಾಗೆ ಆಯಿತು. ಕೂಡಲೇ ಎಲ್ಲರ ಸ್ಥಿತಿ ಅಯೋಮಯವಾಗಿ, ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಮಹಿಳೆ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read