ನನ್ನ ಮಗನಿಗಾದ ನೋವು ದರ್ಶನ್ ಗೂ ಆಗಬೇಕು; ದೊಡ್ಡ ನಟನಾಗಿ ಏನು ಪ್ರಯೋಜನ? ಮಾನವಿಯತೆ ಇಲ್ಲದಂತೆ ವರ್ತಿಸಿದ್ದಾನೆ; ಒಬ್ಬರಿಗೂ ಮನುಷತ್ವವೇ ಇರಲಿಲ್ಲವೇ?ಕಣ್ಣೀರಿಟ್ಟ ರೇಣುಕಾಸ್ವಾಮಿ ತಂದೆ

ಚಿತ್ರದುರ್ಗ: ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಪಟ್ಟಣಗೆರೆ ಶೆಡ್ ನಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವ ನಟ ದರ್ಶನ್ ಹಾಗೂ ಗ್ಯಾಂಗ್ ನ ಕ್ರೌರ್ಯದ ಫೋಟೊಗಳು ವೈರಲ್ ಆಗಿವೆ. ಅದರಲ್ಲಿಯೂ ರೇಣುಕಾಸ್ವಾಮಿ ಕಣ್ಣೀರಿಟ್ಟು, ತನ್ನನ್ನು ಬಿತ್ಟುಬಿಡುವಂತೆ ಅಗಲಾಚುತ್ತಿರುವ ಫೋಟೋ ಲಭ್ಯವಾಗಿದ್ದು, ಮಗನ ಕೊನೇ ಕ್ಷಣಗಳ ಫೋಟೋ ನೋಡಿದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ನನ್ನ ಮಗನಿಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದಾರೆ. ಆತನ ಯಾತನೆಯ ಕ್ಷಣಗಳನ್ನು ನೋಡಿ ತಡೆದುಕೊಳ್ಳಲು ಆಗುತ್ತಿಲ್ಲ. ನನ್ನ ಪುತ್ರನಿಗೆ ಆದ ನೋವು ದರ್ಶನ್ ಗೂ ಆಗಬೇಕು. ಆ ಗ್ಯಾಂಗ್ ನಲ್ಲಿದ್ದ ಎಲ್ಲರಿಗೂ ಆಗಬೇಕು ಎಂದು ಕಣ್ಣೀರಿಟ್ಟಿದ್ದಾರೆ.

ನನ್ನ ಮಗನ ಸ್ಥಿತಿಯ ಬಗೆಗಿನ ಸುದ್ದಿ ನೋಡಿ ನೋಡಿ ಜೀವಂತವಾಗಿ ಸತ್ತುಹೋಗುತ್ತಿದ್ದೇವೆ. ಪ್ರತಿದಿನ ಕಣ್ಣೀರಲ್ಲೇ ಕಾಲ ಕಳೆಯುತ್ತಿದ್ದೇವೆ. ಚಿತ್ರಹಿಂಸೆ ನೀಡಿ ಕೊಲ್ಲುವಾಗ ನನ್ನ ಮಗ ಬೇಡಿಕೊಂಡರೂ ಅಲ್ಲಿರುವ ಯಾರಿಗೂ ಮನುಷತ್ವ ಎನ್ನುವುದೇ ಇರಲಿಲ್ಲವೇ? ನಮ್ಮ ಎಲ್ಲರ ಆರೋಗ್ಯವೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮನುಷತ್ವವಿಲ್ಲದ ಇಂತಹ ರಾಕ್ಷಸರೂ ಇದ್ದಾರೆ ಎಂಬುದನ್ನು ಪ್ರತಿದಿನ ರಾಜ್ಯದ ಜನತೆ ನೋಡುತ್ತಿದ್ದಾರೆ. ಎಷ್ಟು ದೊಡ್ಡ ನಟನಾದರೂ ಏನು ಪ್ರಯೋಜನ? ನಟನೆ ಮಾಡಿ ಏನು ಬಂತು? ನಿಜ ಜೀವನದಲ್ಲಿ ಎಳ್ಳು ಕಾಳಿನಷ್ಟು ಮಾನವೀಯತೆ ಇಲ್ಲದಂತೆ ನಡೆದುಕೊಂಡಿರುವಾಗ ಏನು ಮಾಡಿದರೂ ಪ್ರಯೋಜನವಿಲ್ಲ…. ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read