ಕಚೇರಿಯಲ್ಲಿ ಕೆಲಸ ಮಾಡುವಾಗ ನೆನಪಿಡಿ ಈ ವಿಷಯ

ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಬೆನ್ನು, ಕಣ್ಣು ನೋವು ಬಂದಿದೆಯೇ. ಹೌದು ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ತಲೆ, ಕುತ್ತಿಗೆ, ಕಣ್ಣಿನ ನೋವಿಗೆ ಕಾರಣವಾಗಬಹುದು.

ಅದರ ತಡೆಗೆ ಏನು ಮಾಡಬಹುದು ನೋಡೋಣ. ಕಣ್ಣು ನೋವು ತಪ್ಪಿಸಲು ಕಂಪ್ಯೂಟರ್ ಪರದೆಯಲ್ಲಿ ಅಕ್ಷರಗಳ ಗಾತ್ರ ಹೆಚ್ಚಿಸಿ. ಗೌಪ್ಯ ಕೆಲಸವಿದ್ದಾಗ ಮಾತ್ರ ಸಣ್ಣ ಅಕ್ಷರ ಮಾಡಿಕೊಳ್ಳಿ. ಇದರಿಂದ ಕಂಪ್ಯೂಟರ್ ನೋಡಿ ಕಣ್ಣು ಹಾಗೂ ತಲೆನೋವು ಆಗುವುದನ್ನೂ ತಪ್ಪಿಸಬಹುದು.

ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳುವ ಬದಲು ಭಂಗಿ ಬದಲಾಯಿಸುತ್ತಿರಿ. ಅತ್ಯುತ್ತಮ ವಿಧಾನವೆಂದರೆ ಅರ್ಧ ಗಂಟೆಗೊಮ್ಮೆ ನೀರು ಕುಡಿಯಲು ಅಥವಾ ಶೌಚಾಲಯ ಬಳಸಲು ಕುಳಿತಲ್ಲಿಂದ ಎದ್ದೇಳಿ. ಎರಡು ನಿಮಿಷದ ವಿರಾಮವಾದರೂ ಸಾಕು. ಅತ್ತಿಂದಿತ್ತ ಕಾಲಾಡಿಸಿ ಬನ್ನಿ.

ಕುಳಿತಲ್ಲೇ ಮಾಡಬಹುದಾದ ಸರಳ ವ್ಯಾಯಾಮಗಳ ಬಗ್ಗೆ ತಿಳಿಯಿರಿ. ಒಂದೇ ಸಮನೆ ಕೀ ಬೋರ್ಡ್ ಕುಟ್ಟಿ ಕೈ ಬೆರಳು ಹಾಗೂ ತೋಳು ನೋಯುವುದನ್ನು ತಪ್ಪಿಸಲು ಸರಳ ವ್ಯಾಯಾಮಗಳು ಅಂದರೆ ಒಂದೆರಡು ನಿಮಿಷ ಕೈಯನ್ನು ನೇರವಾಗಿ ಹಿಡಿದುಕೊಳ್ಳುವಂತ ವ್ಯಾಯಾಮಗಳನ್ನು ಮಾಡಿ.

ಕಣ್ಣಿಗೆ ವಿರಾಮ ನೀಡಿ. ಎರಡು ಗಂಟೆಗೊಮ್ಮೆ ಒಂದು ನಿಮಿಷ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಇದರಿಂದ ದೃಷ್ಟಿ ಸಮಸ್ಯೆಯೂ ಬರುವುದಿಲ್ಲ. ವಿಪರೀತ ಟೆನ್ಶನ್ ತೆಗೆದುಕೊಂಡು ಮಾಡುವ ಯಾವುದೇ ಕೆಲಸ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರಬಲ್ಲದು ಎಂಬುದನ್ನು ನೆನಪಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read