ನೆನಪಿದೆಯಾ ಹುಣಸೇ ಕ್ಯಾಂಡಿ ? ಇಲ್ಲಿದೆ ಅದರ ರೆಸಿಪಿ

ನಾವೆಲ್ಲರೂ ಚಿಕ್ಕ ವಯಸ್ಸಿನಲ್ಲಿ ತಿಂದ ಹುಣಸೆ ಹಣ್ಣಿನ ಮಿಠಾಯಿ-ನಿಮಿಷಗಳಲ್ಲಿ ಮಾಡಿ | Tamarind Candy - Imli Cabdy - YouTube

ಮೂವತ್ತು ವರ್ಷಗಳ ಹಿಂದೆ ಇದ್ದ ಜಂಕ್ ಫುಡ್ ಗಳನ್ನ ನೆನಪು ಮಾಡಿಕೊಂಡರೆ ಹುಣಸೇ ಕ್ಯಾಂಡಿ ನೆನಪಾಗಬಹುದು. ಹಾನಿಕಾರಕವಲ್ಲದ ಜಂಕ್ ಇದು. ಹುಣಸೇ ಹಣ್ಣಿನ ಹೆಸರು ಕೇಳಿದರೇ ಸಾಕು ಬಾಯಲ್ಲಿ ನೀರೂರುತ್ತದೆ ಅಲ್ವೇ ? ಹುಣಸೇ ಕ್ಯಾಂಡಿ ಮಾಡೋದು ನೀವು ಮರೆತಿದ್ದರೆ ಇಲ್ಲಿದೆ ಅದರ ರೆಸಿಪಿ.

ಹುಣಸೇ ಹಣ್ಣು – ಒಂದು ಹಿಡಿ

ಜೀರಿಗೆ – ಒಂದು ಚಮಚ

ಖಾರದ ಪುಡಿ – ಅರ್ಧ ಚಮಚ

ಬೆಲ್ಲ – ಸ್ವಲ್ಪ

ಕಲ್ಲುಪ್ಪು – ಸ್ವಲ್ಪ

ವಿಧಾನ

ಮೊದಲು ಜೀರಿಗೆಯನ್ನು ಕುಟಾಣಿಯಲ್ಲಿ ಕುಟ್ಟಿ, ಜೀರಿಗೆ ಸ್ವಲ್ಪ ಪುಡಿ ಆದ ನಂತರ, ಹುಣಸೇ ಹಣ್ಣು, ಅಚ್ಚ ಖಾರದ ಪುಡಿ, ಉಪ್ಪು ಹಾಗೂ ಬೆಲ್ಲ ಸೇರಿಸಿ ಚೆನ್ನಾಗಿ ಎಲ್ಲವೂ ಹೊಂದುವವರೆಗೂ ಕುಟ್ಟಿ ನಂತರ ಐಸ್ ಕ್ರೀಮ್ ಸ್ಟಿಕ್ ನಲ್ಲಿ ಅಂಟಿಸಿ ಲಾಲಿ ಪಾಪ್ ನಂತೆ ಅಂಟಿಸಿ ಕೊಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read