ದಿನಗೂಲಿ, ಹೊರ ಗುತ್ತಿಗೆ ನೌಕರರಿಗೆ ಗುಡ್ ನ್ಯೂಸ್: ವೇತನ, ವೈದ್ಯಕೀಯ ವೆಚ್ಚ ಹೆಚ್ಚುವರಿ ಅನುದಾನ ಬಿಡುಗಡೆ

ಬೆಂಗಳೂರು: ವಿವಿಧ ತಾಲ್ಲೂಕು ಪಂಚಾಯಿತಿಗಳ ಹಾಗೂ ಅವುಗಳ ವ್ಯಾಪ್ತಿಯ ಇಲಾಖೆಗಳಲ್ಲಿ ಬಾಕಿ/ಪ್ರಸಕ್ತ ಸಾಲಿನ ವೇತನ ವೇತನೇತರ ವೆಚ್ಚ ದಿನಗುಲಿ ನೌಕರರ ವೇತನ/ ಉಪದಾನ ಹೊರಗುತ್ತಿಗೆ ನೌಕರರ ವೇತನ ಮತ್ತು ವೈದ್ಯಕೀಯ ವೆಚ್ಚ ಮರು ಪಾವತಿಗಾಗಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಗೊಳಿಲಾಗಿದೆ.

ತಾಲೂಕು ಪಂಚಾಯತಿಗಳಿಗೆ ಕಾಲಂ 3 ಕಾರ್ಯಕ್ರಮದಡಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಅಧಿಕಾರಿ/ಸಿಬ್ಬಂದಿಯವರ ಬಾಕಿ/ಪ್ರಸಕ್ತ ಸಾಲಿನ ವೇತನ ಮತ್ತು ದಿನಗೂಲಿ ಸಿಬ್ಬಂದಿಯ ಉಪದಾನ ಪಾವತಿಗಾಗಿ ಅನುದಾನವನ್ನು ಕಾಲಂ 4ರ ಲೆಕ್ಕ ಶೀರ್ಷಿಕೆಯಡಿ 82.61ಲಕ್ಷ ರೂ. ಬಿಡುಗಡೆಗೊಳಿಸಿದೆ.

ಸೂಚನೆ:

ಬಿಡುಗಡೆಗೊಳಿಸಿರುವ ಅನುದಾನವನ್ನು ನಿಧಿ-2ಕ್ಕೆ ಜಮೆ ಮಾಡಿಕೊಂಡು, ನಂತರ ಸಂಬಂಧಪಟ್ಟ ಜಿಲ್ಲಾ ಪಂಚಾಯತಿ ಮುಖ್ಯಲೆಕ್ಕಾಧಿಕಾರಿಗಳು ಮರು ಹೊಂದಾಣಿಕೆ ಆದೇಶವನ್ನು ಸುತ್ತೋಲೆರನ್ವಯ ಆರ್ಥಿಕ ಇಲಾಖೆಗೆ ಸಲ್ಲಿಸಿ ಖಜಾನೆಯಲ್ಲಿ ಅಪ್ ಲೋಡ್ ಮಾಡಿಕೊಳ್ಳುವುದು. ಲೆಕ್ಕ ಶೀರ್ಷಿಕೆ 2515-00-101-0-26-033, 034, 021 ಮತ್ತು 251ರಡಿ ಬಿಡುಗಡೆಗೊಳಿಸಿರುವ ಅನುದಾನಕ್ಕೆ ಮರು ಹೊಂದಾಣಿಕೆ ಅಗತ್ಯವಿರುವುದಿಲ್ಲ. ಅದೇ ಕಾರ್ಯಕ್ರಮದಡಿ ವೆಚ್ಚ ಭರಿಸುವುದು, ಬಿಡುಗಡೆಗೊಳಿಸಿದ ಈ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಕಾಲಕಾಲಕ್ಕೆ ನೀಡಲಾಗಿರುವ ಸೂಚನೆಗಳ ಹಾಗೂ ನಿಯಮಾನುಸಾರ ಆದ್ಯತೆಯ ಮೇಲೆ ವೆಚ್ಚ ಮಾಡತಕ್ಕದ್ದು ಎಂದು ತಿಳಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read