ಸಂಬಂಧಗಳು ಸದಾ ಗಟ್ಟಿಯಾರಬೇಕು ಅಂದರೆ ಮರೆವು ರೂಢಿಸಿಕೊಳ್ಳಿ

 

ಮರೆವು ಇದನ್ನ ಒಂದು ಸಮಸ್ಯೆ ಅಥವಾ ಖಾಯಿಲೆ ಎಂದು ಎಷ್ಟೋ ಜನ ಅಂದುಕೊಳ್ಳುತ್ತಾರೆ. ವಾಸ್ತವದಲ್ಲಿ ಮರೆವು ಒಂದೊಳ್ಳೆ ಔಷಧಿ. ಅದರಲ್ಲೂ ಸಂಬಂಧದಲ್ಲಿ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಮರೆವು ಅತೀ ಅಗತ್ಯ.

* ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿದೆ. ಅದರ ಅರ್ಥ ಇಂದಿನ ಮನಸ್ತಾಪವನ್ನು ಇಂದಿಗೆ ಮರೆತು ನಾಳೆ ಹೊಸದಾಗಿ ದಿನ ಪ್ರಾರಂಭ ಮಾಡಬೇಕು ಅಂತ. ಹೀಗಿದ್ದಾಗ ಮಾತ್ರ ಮನಸ್ಸು ಹಗುರಾಗಿ, ಹೊಸತನದಿಂದ ದಿನ ಪ್ರಾರಂಭ ಮಾಡಲು ಅನುವಾಗುತ್ತದೆ.

* ಹದಿಹರೆಯದ ಮಕ್ಕಳ ತಪ್ಪುಗಳನ್ನು ಪದೇ ಪದೇ ಅವರಿಗೆ ನೆನಪಿಸದೆ, ಒಮ್ಮೆ ಎಚ್ಚರಿಕೆ ಕೊಟ್ಟು ನೀವೂ ಮರೆತುಬಿಡುವುದು ಒಳ್ಳೆಯದು. ಮರೆಯಬೇಕಾದ್ದನ್ನು  ಮತ್ತೆ ಮತ್ತೆ ಮಾತಿನ ಮೂಲಕ ಚುಚ್ಚುತ್ತಾ ಹೋದಂತೆ, ಮಕ್ಕಳಿಗೆ ತಮ್ಮ ಪೋಷಕರು ತಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂಬ ಭಾವನೆ ಉಂಟಾಗುತ್ತದೆ.

* ಹರೆಯದ ಪ್ರೀತಿ ಅನಿವಾರ್ಯವಾಗಿ ಕಡಿದುಹೋದರೆ ಅದನ್ನು ಮರೆತು ಮುಂದಿನ ಗುರಿಯ ಕಡೆ ಹೆಜ್ಜೆ ಹಾಕಲು ಮರೆವು ಬೇಕೇ ಬೇಕು.

* ಸ್ನೇಹತರು ಹಾಗೂ ಸಹೋದ್ಯೋಗಿಗಳಲ್ಲಿ ತೀರಾ ಸಲಿಗೆ ಸಾಮಾನ್ಯ. ಸಲಿಗೆ ಇಂದ ಕೆಲವೊಮ್ಮೆ ತಿಳಿದೋ ತಿಳಿಯದೆಯೋ ತಪ್ಪಾದ ಮಾತು, ಮನಸ್ತಾಪ ಉಂಟಾಗಿರುತ್ತದೆ. ಇದನ್ನೂ ಮರೆತು ಮತ್ತೆ ಮೊದಲಿನ ಹಾಗೆ ಬೆರೆತರೆ ಬಂಧ ಬಿಗಿಯಾಗಿ, ಬಹುಕಾಲ ನೆನಪಿನಲ್ಲಿ ಉಳಿಯುವ ಸಿಹಿ ನೆನಪುಗಳನ್ನು ಕೂಡಿಟ್ಟುಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read