ಡಿಜಿಟಲ್ ಡೆಸ್ಕ್ : ರಿಜಿಸ್ಟ್ರಾರ್ ಪೋಸ್ಟನ್ನು ಸ್ಪೀಡ್ ಪೋಸ್ಟ್ ನಲ್ಲಿ ವಿಲೀನಗೊಳಿಸುವ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಭಾರತ ಸರ್ಕಾರದ ಅಂಚೆ ಸಚಿವಾಲಯದ ಉಲ್ಲೇಖಿತ ಅಧಿಕೃತ ಜ್ಞಾಪನದಲ್ಲಿ, ಅಂಚೆ ಇಲಾಖೆಯು, ತನ್ನ ಅಂಚೆ ಉತ್ಪನ್ನಗಳ ಸೇವೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯವನ್ನು ಕೈಗೊಳ್ಳುತ್ತಿದ್ದು, ಅದರಂತೆ, ದಿನಾಂಕ:01.08.2025 ರಿಂದ ನೋಂದಾಯಿತ ಅಂಚೆ ಸೇವೆಯನ್ನು, ಕಾರ್ಯಚರಣೆಯ ದಕ್ಷತೆ, ಟ್ರಾಕಿಂಗ್ ಸಾಮರ್ಥ್ಯ ಮತ್ತು ಗ್ರಾಹಕರ ಅನುಕೂಲತೆಯನ್ನು ಸುಧಾರಣೆಗೊಳಿಸುವುದಕ್ಕಾಗಿ, ಸಂವಹನದ ಅಗತ್ಯತೆಗಳು ಮತ್ತು ತಾಂತ್ರಿಕ ಪ್ರಗತಿಗೆ ಅನುಗುಣವಾಗಿ ಸ್ಪೀಡ್-ಫೋಸ್ಟ್” ಸೇವೆಯಲ್ಲಿ ವಿಲೀನಗೊಳಿಸುತ್ತಿದೆ.
ಆದ್ದರಿಂದ, ಸಚಿವಾಲಯದ ಎಲ್ಲಾ ಇಲಾಖೆಗಳು/ಮಾನ್ಯ ಮುಖ್ಯ ಮಂತ್ರಿಯವರ ಸಚಿವಾಲಯ/ ಮಾನ್ಯ ಸಚಿವರ ಆಪ್ತ ಶಾಖೆಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಸಾಮಾನ್ಯ ರವಾನೆ) ಶಾಖೆಗೆ ಕಳುಹಿಸುವ ನೋಂದಾಯಿತ ಅಂಚೆ ಲಕೋಟೆಗಳ ಮೇಲೆ, ಇನ್ನು ಮುಂದೆ ನೋಂದಾಯಿತ ಅಂಚೆ (Register post/RPAD) ಎಂಬುದರ ಬದಲಾಗಿ, ತುರ್ತು ಅಂಚೆ (Speed Post) ಎಂದು ನಮೂದಿಸುವಂತೆ ಈ ಮೂಲಕ ತಿಳಿಸಿದೆ.
