ಗರ್ಲ್‌ಫ್ರೆಂಡ್‌ಗೆ ಸೀಟು ಬಿಟ್ಟುಕೊಡದ ರೆಡ್ಡಿಟ್ ಬಳಕೆದಾರನಿಗೆ ನೆಟ್ಟಿಗರ ತರಾಟೆ

ಹೀಲ್ಸ್‌ ಧರಿಸಿ ನಿಂತಿದ್ದ ತನ್ನ ಗರ್ಲ್‌ಫ್ರೆಂಡ್‌ಗೆ ಬಸ್ಸಿನಲ್ಲಿ ಸೀಟು ಬಿಟ್ಟುಕೊಡಲಿಲ್ಲ ಎಂಬ ಕಾರಣಕ್ಕೆ ರೆಡ್ಡಿಟ್ ಬಳಕೆದಾರನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗ್ರಾಸವಾಗಿದ್ದಾರೆ.

ವಿಶೇಷವಾದ ಡ್ರೆಸ್‌ನಲ್ಲಿ ಮಿಂಚುತ್ತಿದ್ದ ಈತ ತನ್ನ ಗರ್ಲ್‌ಫ್ರೆಂಡ್‌ ಜೊತೆಗೆ ವಿಶೇಷ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದುದ್ದಾಗಿ ಹೇಳಿಕೊಂಡಿದ್ದಾರೆ. ಕಾರ್ಯಕ್ರಮ ಬೇರೊಂದು ಊರಿನಲ್ಲಿದ್ದು, ತಮ್ಮ ಬಳಿ ಕಾರು ಇಲ್ಲದೇ ಇದ್ದಿದ್ದರಿಂದ ಹೀಗೆ ಬಸ್ಸಿನಲ್ಲಿ ಹೋಗುತ್ತಿದ್ದುದಾಗಿ ಈತ ಹೇಳಿಕೊಂಡಿದ್ದಾರೆ.

“ಬಸ್ಸನ್ನೇರಿದಾಗ, ನಾನು ಮೊದಲು ಬಸ್ಸಿನೊಳಗೆ ಬಂದು ಕೊನೆಯ ಆಸನದಲ್ಲಿ ಕುಳಿತೆ ಹಾಗೂ ನನ್ನ ಗರ್ಲ್‌‌ಫ್ರೆಂಡ್ ನನ್ನ ಪಕ್ಕದಲ್ಲೇ ಕುಳಿತಳು. ಬಸ್ಸು ಚಲಿಸಲು ಆರಂಭಿಸಿದ ವೇಳೆ ದಣಿದಿದ್ದ ಕಾರಣ ತಾನು ಸೀಟಿನಲ್ಲಿ ಕುಳಿತುಕೊಳ್ಳಬಹುದೇ ಎಂದು ಆಕೆ ಕೇಳಿದಳು. ಆದರೆ ಖುದ್ದು ನಾನು ಸಹ ದಣಿದಿದ್ದ ಕಾರಣ ಹೀಗೆ ಮಾಡಲು ನಿರಾಕರಿಸಿದೆ. ಆದರೆ ಆಕೆ ಸದಾ ಹೀಲ್ಸ್ ಧರಿಸುವ ಕಾರಣ ನನಗೆ ಆಕೆಯ ಈ ಕೋರಿಕೆ ಅಷ್ಟು ಗಂಭೀರವಾದದ್ಧು ಎನಿಸಲಿಲ್ಲ. ಸಾಮಾನ್ಯವಾಗಿ ತಾನು ಬ್ಲಾಕ್ ಹೀಲ್ಸ್‌ ಧರಿಸುವುದಾಗಿಯೂ ಈ ಬಾರಿ ತಾನು ಸ್ಟಿಲೆಟ್ಟೋಗಳನ್ನು ಧರಿಸಿದ್ದಾಗಿಯೂ ಆಕೆ ತಿಳಿಸಿದರೂ ಸಹ ನನಗೆ ಅವುಗಳ ನಡುವೆ ವ್ಯತ್ಯಾಸ ಗೊತ್ತಾಗದ ಕಾರಣ ಹೀಗಾಯಿತು,” ಎಂದು ರೆಡ್ಡಿಟ್ ಬಳಕೆದಾರ ಹೇಳಿಕೊಂಡಿದ್ದಾರೆ.

ಆಕೆ ಹೆಚ್ಚಾಗಿ ಜಿಮ್‌ಗೆ ಹೋಗುವ ಕಾರಣ ಹೆಚ್ಚು ಫಿಟ್ ಆಗಿದ್ದು ಆಕೆಯ ಸ್ಟಾಮಿನಾ ಸಹ ಚೆನ್ನಾಗೇ ಇದೆ ಎಂದು ಈತ ಇದೇ ವೇಳೆ ಹೇಳಿಕೊಂಡಿದ್ದಾರೆ.

ಇದೀಗ ಈ ಪುರುಷನಿಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದು, ಯುವತಿ ನಿಂತಿದ್ದರೂ ಆಕೆಗೆ ಸೀಟು ಬಿಟ್ಟುಕೊಡದ ಕಲ್ಲು ಹೃದಯಿ ಆತ ಎಂದು ಟೀಕಿಸಿದ್ದಾರೆ.

AITA for not giving up my seat on the bus to my girlfriend.
byu/aitabus inAmItheAsshole

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read