ಮನಬಂದಂತೆ ಕಾರು ನುಗ್ಗಿಸಿದವನಿಗೆ ಪೊಲೀಸರಿಂದ ಪಾಠ: ವಿಡಿಯೋ ನೋಡಿ​ ಭೇಷ್​ ಎಂದ ನೆಟ್ಟಿಗರು

ಕೆಲವು ವಾಹನ ಚಾಲಕರಿಗೆ ಬಹಳ ಅರ್ಜೆಂಟ್​. ಟ್ರಾಫಿಕ್​ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮುನ್ನುಗ್ಗಲು ಹವಣಿಸುವ ಹಲವು ವಾಹನ ಚಾಲಕರನ್ನು ನೋಡಬಹುದು. ರಸ್ತೆ ಚಿಕ್ಕದ್ದಾಗಿದ್ದರೂ ದ್ವಿಪಥವಾಗಿದ್ದರೂ ಮತ್ತೊಂದು ಕಡೆಯಿಂದ ವಾಹನ ಬರಬಹುದು ಎಂಬ ಗೋಜಿಗೂ ಹೋಗದೆ ನುಗ್ಗುವುದೊಂದೇ ಮಾಡುತ್ತಾರೆ. ಅಂಥದ್ದರಿಂದಲೇ ಎಷ್ಟೋ ಬಾರಿ ಅಪಘಾತಗಳು ಸಂಭವಿಸುವುದು ಉಂಟು. ಕೆಲವೊಮ್ಮೆ ಅಮಾಯಕರ ಪ್ರಾಣವೂ ಹೋಗುವುದು ಉಂಟು.

ಅಂಥದ್ದೇ ಕಾರು ಚಾಲಕರ ವಿಡಿಯೋ ಒಂದು ವೈರಲ್​ ಆಗಿದ್ದು, ಇದು ನಗು ತರಿಸುವಂತಿದೆ. ಅಸಲಿಗೆ ಇದು ಕಿರಿದಾದ ರಸ್ತೆಯಾಗಿದೆ. ದ್ವಿಪಥವನ್ನು ಹೊಂದಿದೆ. ಆದರೆ ಕೆಲವು ಕಾರಿನ ಚಾಲಕರು ಮುನ್ನುಗ್ಗುವ ಪ್ರಯತ್ನದಲ್ಲಿ ಒಂದೇ ಮಾರ್ಗದಲ್ಲಿ ನುಗ್ಗುವುದನ್ನು ಕಾಣಬಹುದು.

ಇವರಿಗೆ ಬುದ್ಧಿ ಕಲಿಸಲು ಪೊಲೀಸರು ಅತ್ತ ಕಡೆಯಿಂದ ಬೈಕ್​ನಲ್ಲಿ ತಂಡೋಪತಂಡವಾಗಿ ಬಂದಿದ್ದಾರೆ. ಇತ್ತ ಕಡೆಯಿಂದ ನುಗ್ಗಿರುವ ಕಾರಿನ ಚಾಲಕರು ಏನು ಮಾಡಬೇಕು ಎಂದು ತಿಳಿಯದೇ ರಿವರ್ಸ್​ ಗೇರ್​ನಲ್ಲಿ ವಾಪಸ್​ ಬಹು‌ ದೂರದವರೆಗೆ ಹಿಂದಕ್ಕೆ ಚಲಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನು ನೋಡಿ ಹಲವರು ತಮ್ಮ ಏರಿಯಾ ಪೊಲೀಸರು ಕೂಡ ಈ ರೀತಿ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಚಾಲಕರಿಗೆ ಅದರಲ್ಲಿಯೂ ಕಾರಿನ ಚಾಲಕರಿಗೆ ಬುದ್ಧಿ ಬರುವುದಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read