ರಸ್ತೆಯಲ್ಲಿ ತಪ್ಪಾಗಿ ಪಾರ್ಕ್ ಮಾಡಿದ್ದ ಕಾರನ್ನು ಬರಿಗೈಲಿ ಎತ್ತಿ ಪಕ್ಕಕ್ಕಿಟ್ಟ ಸರ್ದಾರ್‌ ಜಿ

ದೇಶದೆಲ್ಲೆಡೆ ಸ್ವಂತ ವಾಹನಗಳ ಸಂಖ್ಯೆ ವಿಪರೀತವಾದ ಕಾರಣ ಪಾರ್ಕಿಂಗ್ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಪಾರ್ಕಿಂಗ್‌ ಸ್ಥಳಗಳಿಂದ ನಮ್ಮ ವಾಹನಗಳನ್ನು ಮರಳಿ ರಸ್ತೆಗೆ ತರುವುದು ಸಹ ಒಂದು ದೊಡ್ಡ ಸವಾಲೇ ಆಗಿದೆ.

ಕಿರಿದಾದ ರಸ್ತೆಯೊಂದರಲ್ಲಿ ಟಾಟಾ ಹ್ಯಾರಿಯರ್‌ ಚಾಲನೆ ಮಾಡುತ್ತಾ ಬಂದ ವ್ಯಕ್ತಿಯೊಬ್ಬರು, ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ವ್ಯಾಗನಾರ ಕಾರೊಂದು ತಮ್ಮ ಹಾದಿಗೆ ಅಡ್ಡವಾದ ಕಾರಣ, ಆ ಕಾರನ್ನೇ ಕೈಗಳಲ್ಲಿ ಪಕ್ಕಕ್ಕೆ ಸರಿಸಿದ ವಿಡಿಯೋ ವೈರಲ್ ಆಗಿದೆ.

ತಾವು ಬರುತ್ತಿದ್ದ ಟಾಟಾ ಹ್ಯಾರಿಯರ್‌ ಕಾರನ್ನು ನಿಲ್ಲಿಸಿದ ಅದರ ಚಾಲಕ ಮಾರುತಿ ವ್ಯಾಗನಾರ್‌ ಕಾರನ್ನು ಬರಿಗೈಗಳಿಂದ ಎತ್ತಿ ಪಕ್ಕಕ್ಕೆ ಇಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

“ಮೊದಲೇ ಆತ ಪಂಜಾಬಿ..” ಎಂದು ನೆಟ್ಟಿಗರೊಬ್ಬರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

https://youtu.be/F5Oqw5W_aCE

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read