10 ವರ್ಷಗಳ ನಂತರ ವಾಂಖೆಡೆಯಲ್ಲಿ ಗೆದ್ದ RCB: ತವರಿನಲ್ಲೇ ಮುಂಬೈಗೆ ಮುಖಭಂಗ

ಮುಂಬೈ: 10 ವರ್ಷಗಳ ನಂತರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯಗಳಿಸಿದೆ.

ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 12 ರನ್ ಗೆಲುವು ಸಾಧಿಸಿದೆ. 2015ರ ನಂತರ ವಾಂಕೆಡೆ ಸ್ಟೇಡಿಯಂನಲ್ಲಿ ಆರ್.ಸಿ.ಬಿ.ಗೆ ಸಿಕ್ಕ ಮೊದಲ ಜಯ ಇದಾಗಿದೆ. ಈ ಬಾರಿ ಆರ್ಸಿಬಿ ಆಡಿದ 4 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಿದ್ದು, ಮುಂಬೈ ತಂಡ ಆಡಿದ ಐದು ಪಂದ್ಯಗಳಲ್ಲಿ 4 ಪಂದ್ಯಗಳನ್ನು ಸೋತಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಐದು ವಿಕೆಟ್ ಗೆ 221 ರನ್ ಕಲೆ ಹಾಕಿದ್ದು, ಬೃಹತ್ ಮೊತ್ತ ಬೆನ್ನತ್ತಿದ ಮುಂಬೈ 9 ವಿಕೆಟ್ ಗೆ 209 ರನ್ ಗಳಿಸಿ ಸೋಲು ಕಂಡಿದೆ.

ಆರ್ಸಿಬಿ ಪರವಾಗಿ ವಿರಾಟ್ ಕೊಹ್ಲಿ 67, ರಜತ್ ಪಾಟಿದಾರ್ 64, ಜಿತೇಶ್ ಶರ್ಮಾ ಅಜೇಯ 40 ರನ್ ಗಳಿಸಿದರು. ಮುಂಬೈ ಪರ ಟ್ರೆಂಟ್ ಬೋಲ್ಟ್ 2, ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.

ಮುಂಬೈ ಪರವಾಗಿ ತಿಲಕ್ ವರ್ಮಾ 56, ಹಾರ್ದಿಕ್ ಪಾಂಡ್ಯ 42 ರನ್ ಗಳಿಸಿದರು. ಆರ್ಸಿಬಿ ಕೃನಾಲ್ ಪಾಂಡ್ಯ 4, ಜೋಶ್ ಹೇಜಲ್ ವುಡ್ 2, ಯಶ್ ದಯಾಳ್ 2 ಪಡೆದು ಮಿಂಚಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read