ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ RBI ನಿಂದ ‘ಸಾವರಿನ್ ಗ್ರೀನ್ ಬಾಂಡ್’ ಬಿಡುಗಡೆ

ಮುಂಬೈ: ಪರಿಸರ ಸ್ನೇಹಿ ಯೋಜನೆಗಳಿಗೆ ಅಗತ್ಯವಾದ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜನವರಿ 25 ಮತ್ತು ಫೆಬ್ರವರಿ 9 ರಂದು ಎರಡು ಹಂತದಲ್ಲಿ ತಲಾ 8000 ಕೋಟಿ ರೂಪಾಯಿ ಮೌಲ್ಯದ ಗ್ರೀನ್ ಬಾಂಡ್ ಗಳನ್ನು ಬಿಡುಗಡೆ ಮಾಡಲಿದೆ.

ದೇಶದ ಇತಿಹಾಸದಲ್ಲಿಯೇ ಗ್ರೀನ್ ಬಾಂಡ್ ಗಳನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲಾಗಿದ್ದು, ಈ ಬಾಂಡ್ ಗಳಿಂದ ಸಂಗ್ರಹಿಸಲಾಗುವ ಹಣವನ್ನು ಸರ್ಕಾರದಿಂದ ಕೈಗೊಳ್ಳುವ ಆರ್ಥಿಕತೆ ಮೇಲೆ ಇಂಗಾಲದ ಪರಿಣಾಮಗಳನ್ನು ಕಡಿಮೆ ಮಾಡುವ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು.

ಇದು 5 ವರ್ಷ, 10 ವರ್ಷದ ಅವಧಿಯನ್ನು ಹೊಂದಿರುತ್ತದೆ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಉತ್ತೇಜನ ನೀಡುವ ಸಾರ್ವಜನಿಕ ವಲಯದ ಯೋಜನೆಗಳಿಗೆ ನಿಧಿ ಒದಗಿಸುವ ಸಲುವಾಗಿ ಆರ್.ಬಿ.ಐ. 16 ಸಾವಿರ ಕೋಟಿ ರೂಪಾಯಿಗಳ ಸಾವರಿನ್ ಗ್ರೀನ್ ಬಾಂಡ್ ಬಿಡುಗಡೆ ಮಾಡಲಿದೆ.

ಎರಡು ಹಂತಗಳಲ್ಲಿ ತಲಾ 8,000 ಕೋಟಿ ರೂ. ಮೊತ್ತದ ಹಸಿರು ಬಾಂಡ್ ಬಿಡುಗಡೆ ಮಾಡಲಿದ್ದು, ಜನವರಿ 25 ರಂದು ಮೊದಲ ಹಾಗೂ ಫೆಬ್ರವರಿ 9 ರಂದು ಎರಡನೇ ಹಂತದಲ್ಲಿ ಹಸಿರು ಬಾಂಡ್ ಹರಾಜು ನಡೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read