ಫೆಬ್ರವರಿಯಿಂದ ಪಡಿತರ ಚೀಟಿದಾರರಿಗೆ ಹೆಚ್ಚುವರಿ ಅಕ್ಕಿ ವಿತರಣೆ

ಶಿವಮೊಗ್ಗ: ರಾಜ್ಯ ಸರ್ಕಾರ 2023ರ ಜನವರಿಯಿಂದ ರಾಜ್ಯ ಎಲ್ಲಾ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಎನ್‍ಎಫ್‍ಎಸ್‍ಎ ಹಂಚುವ 5 ಕೆ.ಜಿ. ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ 1 ಕೆ.ಜಿ. ಅಕ್ಕಿ ವಿತರಿಸಲು ಆದೇಶಿಸಿದೆ.

ಸಕಾಲದಲ್ಲಿ ಅಕ್ಕಿ ಸರಬರಾಜು ಲಭ್ಯವಿಲ್ಲದ್ದರಿಂದ ಹಾಗೂ ನ್ಯಾಯಬೆಲೆ ಅಂಗಡಿಗಳ ಬಿಲ್ಲಿಂಗ್ ವ್ಯವಸ್ಥೆ ಮತ್ತು ಪಿಓಎಸ್ ಆರಂಭಗೊಂಡಿರುವ ಕಾರಣ 2023ರ ಫೆಬ್ರವರಿ ಮಾಹೆಯಿಂದ 1 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುವುದು.  ಈಗಾಗಲೇ ಆನ್‍ಲೈನ್ ಹಂಚಿಕೆಯಂತೆ ಜನವರಿ-2023ರ ಮಾಹೆಯಲ್ಲಿ ಪ್ರತಿ ಫಲಾನುಭವಿಗೆ ಎನ್‍ಎಫ್‍ಎಸ್‍ಎ 5 ಕೆ.ಜಿ.ಅಕ್ಕಿಯನ್ನು ಮಾತ್ರ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read