ನವದೆಹಲಿ: ದೇಶಾದ್ಯಂತ ಪಡಿತರ ಚೀಟಿಗಳನ್ನು ಶೇಕಡ 100ರಷ್ಟು ಡಿಜಿಟಲೀಕರಣಗೊಳಿಸಲಾಗಿದೆ. ಶೇಕಡ 99 ರಷ್ಟು ಪಡಿತರ ಚೀಟಿಗಳನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ಚೀಟಿ ವಿತರಣಾ ವ್ಯವಸ್ಥೆಯನ್ನು ಸುಧಾರಿಸಲಾಗಿದೆ. ಇನ್ಪುಟ್ ಕ್ರೆಡಿಟ್ ಮರುಪಾವತಿ ವ್ಯವಸ್ಥೆಯನ್ನು ಸರಳಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪೂರ್ಣಗೊಳ್ಳದ ವಿದ್ಯುತ್ ಖರೀದಿ ಒಪ್ಪಂದದ ಸವಾಲು ನಿವಾರಿಸಲು ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಶುದ್ಧ ಇಂಧನ ಯೋಜನೆ ಭಾಗವಾಗಿ ರೂಪಿಸಲಾದ ಪಿಎಂ ಕುಸುಮ್, ಪಿಎಂ ಸೂರ್ಯಘರ್ ಯೋಜನೆಗಳು 12 ರಿಂದ 13 ಲಕ್ಷ ಉದ್ಯೋಗ ಸೃಷ್ಟಿಸಿವೆ ಎಂದಿದ್ದಾರೆ.