ಇಂಡಿಕಾ ಕಾರಿಗೆ 25 ವರ್ಷ: ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡ ರತನ್​ ಟಾಟಾ

ನವದೆಹಲಿ: ಜನವರಿ 15 ಟಾಟಾ ಇಂಡಿಕಾ ಕಾರ್ ಬಿಡುಗಡೆಯಾಗಿ 25 ವರ್ಷ. ಈ ಹಿನ್ನೆಲೆಯಲ್ಲಿ ರತನ್ ಟಾಟಾ 25 ವರ್ಷಗಳ ಹಿಂದಿನ ಘಟನೆಯನ್ನು ಟ್ವಿಟರ್​ನಲ್ಲಿ ಮೆಲುಕು ಹಾಕಿದ್ದಾರೆ.

ಇಂಡಿಕಾ ಕಾರಿನೊಂದಿಗಿನ ತಮ್ಮ ಫೋಟೋ ಶೇರ್​ ಮಾಡಿಕೊಂಡಿದ್ದು, ’25 ವರ್ಷಗಳ ಹಿಂದೆ ಟಾಟಾ ಇಂಡಿಕಾ ಕಾರ್ ಬಿಡುಗಡೆ ಭಾರತದ ದೇಶೀಯ ಪ್ರಯಾಣಿಕರ ಕಾರು ಕೈಗಾರಿಕೆಯ ಜನನಕ್ಕೆ ಕಾರಣವಾಯಿತು. ಇದು ನನಗೆ ಹಳೆಯ ಆತ್ಮೀಯ ನೆನಪುಗಳನ್ನು ಮಾಡಿಕೊಟ್ಟಿರುವ ಜೊತೆಗೆ ನನ್ನ ಹೃದಯದಲ್ಲಿ ನನಗೆ ವಿಶೇಷ ಸ್ಥಾನ ಸಿಗುವಂತೆ ಮಾಡಿದೆ’ ಎಂದಿದ್ದಾರೆ.

ಭಾರತದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಈ ಕಾರನ್ನು 1998ರಲ್ಲಿ ಬಿಡುಗಡೆಗೊಳಿಸಲಾಯಿತು. ಇಂಡಿಗೋನಿಂದ ಹಿಡಿದು ವಿಸ್ತಾ ಹಾಗೂ ಮಂಝ ಮಾಡೆಲ್ ಗಳ ತನಕ ಸಣ್ಣ ಕಾರುಗಳ ಉತ್ಪಾದನೆಗೆ ಇದು ನಾಂದಿ ಹಾಡಿತು.

ಬಿಡುಗಡೆಯಾದ ಕೇವಲ ಎರಡು ವರ್ಷಗಳಲ್ಲೇ ಈ ವಾಹನ ಯಶಸ್ಸು ಗಳಿಸುವ ಜೊತೆಗೆ ಅದರ ಫೀಚರ್ಸ್ ಹಾಗೂ ಲಭ್ಯತೆಯ ಹಿನ್ನೆಲೆಯಲ್ಲಿ ಜನರ ಪ್ರಿಯ ಬ್ರ್ಯಾಂಡ್ ಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು. ಆದರೆ, 20 ವರ್ಷಗಳ ಬಳಿಕ ಅಂದರೆ 2018ರಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ಇದರ ಉತ್ಪಾದನೆ ಸ್ಥಗಿತಗೊಳಿಸಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read