ನಟ ರಣಬೀರ್​ ಕಪೂರ್​ ರನ್ನು ಹಾಡಿಹೊಗಳಿದ ನಟಿ ರಶ್ಮಿಕಾ ಮಂದಣ್ಣ

ಮುಂಬೈ: ರಶ್ಮಿಕಾ ಮಂದಣ್ಣ ಬಾಲಿವುಡ್‌ನ ಸಿನಿಮಾಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ರಣಬೀರ್‌ ಕಪೂರ್‌ ಜೊತೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ಅನಿಮಲ್‌ ಚಿತ್ರೀಕರಣವನ್ನು ಮುಗಿಸಿದ್ದಾರೆ.

ಸದಾ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳ ಜೊತೆ ಟಚ್‌ನಲ್ಲಿರುವ ರಶ್ಮಿಕಾ ಇದೀಗ ಸುದೀರ್ಘವಾಗಿ ರಣಬೀರ್​ ಕುರಿತು ಬರೆದು ಪೋಸ್ಟ್‌ ಮಾಡಿದ್ದಾರೆ. ಇದು ಜನರು ಗಮನ ಸೆಳೆಯುತ್ತಿದೆ.

ರಶ್ಮಿಕಾ ಮಂದಣ್ಣ ಈ ಪೋಸ್ಟ್‌ನಲ್ಲಿ ನಟ ರಣಬೀರ್ ಕಪೂರ್ ಅವರನ್ನು ಹಾಡಿ ಹೊಗಳಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ರಶ್ಮಿಕಾ ಮಂದಣ್ಣ ತಾವು ಮೊದಲು ರಣಬೀರ್‌ ರನ್ನು ಭೇಟಿಯಾದಾಗ ನರ್ವಸ್ ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರೀಕರಣದ ಸಮಯದಲ್ಲಿ ರಣಬೀರ್ ಗುಣ ತುಂಬಾ ಇಷ್ಟವಾಯಿತು ಎಂದಿದ್ದಾರೆ. ಅವರೊಬ್ಬ ಅದ್ಭುತ ನಟ ಮತ್ತು ಅದ್ಭುತ ಮನುಷ್ಯ ಎಂದು ಬಣ್ಣಿಸಿದ್ದಾರೆ.

“ನಾನು ಆರಂಭದಲ್ಲಿ ನರ್ವಸ್‌ ಆಗಿದ್ದೆ. ರಣಬೀರ್ ಕಪೂರ್ ನೋಡಿ ನಾನು ತುಂಬಾ ನರ್ವಸ್ ಆದೆ. ಆದರೆ ಓಹ್‌ ಮೈ ಗಾಡ್‌!! ದೇವರು ನಿಜವಾಗಿಯೂ ರಣಬೀರ್‌ನನ್ನು ಪರಿಪೂರ್ಣರನ್ನಾಗಿ ಮಾಡಲು ತನ್ನ ಸಮಯವನ್ನು ತೆಗೆದುಕೊಂಡಿದ್ದಾನೆ. ಅವರೊಂದು ಸುಂದರ ವ್ಯಕ್ತಿ” ಎಂದು ಬರೆದಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read