ಶಾಲೆಯಲ್ಲೇ ನರಕ ದರ್ಶನ : ಬ್ರಿಟನ್‌ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಆಘಾತಕಾರಿ ವರದಿ ಬಹಿರಂಗ

ಬ್ರಿಟನ್‌ ಪ್ರಾಥಮಿಕ ಶಾಲೆಗಳಲ್ಲಿ ಅತ್ಯಾಚಾರ ಸಂಸ್ಕೃತಿ ವ್ಯಾಪಕವಾಗಿದೆ ಎಂದು ಯುಕೆ ಮೂಲದ ಅಭಿಯಾನ ಗುಂಪು ನಡೆಸಿದ ತನಿಖೆಯಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಕನಿಷ್ಠ 1,600 ಸಂಸ್ಥೆಗಳ ವಿದ್ಯಾರ್ಥಿಗಳು ತಮ್ಮ ಭಯಾನಕ ಅನುಭವಗಳನ್ನು ಅನಾಮಧೇಯವಾಗಿ ಹಂಚಿಕೊಂಡಿದ್ದಾರೆ.

“ಎಲ್ಲರೂ ಆಹ್ವಾನಿತರು” (Everyone’s Invited) ತಯಾರಿಸಿದ ವರದಿಯು ಯುಕೆ ಮತ್ತು ಐರ್ಲೆಂಡ್‌ನ 1,664 ಶಾಲೆಗಳ ಹೆಸರುಗಳನ್ನು ಒಳಗೊಂಡಿದೆ. ಇಲ್ಲಿ 5 ರಿಂದ 11 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಲೈಂಗಿಕ ಕಿರುಕುಳ, ಅನುಚಿತ ಸ್ಪರ್ಶ ಮತ್ತು ಬಲವಂತದ ದೌರ್ಜನ್ಯ ಎದುರಿಸಿದ್ದಾರೆ.

ವರದಿಯಲ್ಲಿರುವ ಆಘಾತಕಾರಿ ಅಂಶಗಳೆಂದರೆ, ಲೈಂಗಿಕ ದೌರ್ಜನ್ಯಕ್ಕೊಳಗಾದವರಲ್ಲಿ 5 ವರ್ಷದ ಮಕ್ಕಳೂ ಸೇರಿದ್ದಾರೆ. 12 ವರ್ಷದ ವಿದ್ಯಾರ್ಥಿನಿಯೊಬ್ಬರು “ಎಲ್ಲರೂ ಆಹ್ವಾನಿತರು” ವೆಬ್‌ಸೈಟ್‌ನಲ್ಲಿ ಬರೆದ ಸಾಕ್ಷ್ಯದಲ್ಲಿ, “ನಾನು 10 ವರ್ಷದವಳಿದ್ದಾಗ ಶಾಲೆಗೆ ಹೋಗುತ್ತಿದ್ದೆ. ಆಗ ಕಾರೊಂದು ಬಂದು ನಿಂತಿತು. ಮೂವರು ಹದಿಹರೆಯದ ಹುಡುಗರು ನನ್ನನ್ನು ಒಳಗೆ ಬರುವಂತೆ ಕೇಳಿದರು. ನಾನು ನಿರಾಕರಿಸಿದೆ, ಆದರೆ ಅವರಲ್ಲಿ ಒಬ್ಬನು ನನ್ನ ಮಣಿಕಟ್ಟನ್ನು ಹಿಡಿದನು. ನಾನು ಧೈರ್ಯವಾಗಿ ಕೂಗಾಡಬೇಕಿತ್ತು ಅಥವಾ ಹೋರಾಡಬೇಕಿತ್ತು, ಆದರೆ ನಾನು ತುಂಬಾ ಹೆದರಿದ್ದೆ” ಎಂದು ಬರೆದಿದ್ದಾರೆ.

ಈ ವರದಿಯು ಬ್ರಿಟನ್‌ನ ಪ್ರಾಥಮಿಕ ಶಾಲೆಗಳಲ್ಲಿನ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದೆ. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಮಕ್ಕಳ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read