ಬೆಂಗಳೂರು: ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡೆನೂರು ಮನು ಮತ್ತೊಂದು ಸ್ಫೋಟಕ ಆಡಿಯೋ ಬಿಡಿಗಡೆ ಮಾಡೊದ್ದಾರೆ.
ತನ್ನ ವಿರುದ್ಧ ಸಹಕಲಾವಿದೆ ಅತ್ಯಾಚಾರ ಅರೋಪ ಮಾಡಿ, ಪ್ರಕರಣ ದಾಖಲಿಸುತ್ತಿದ್ದಂತೆ ಸಾಲು ಸಾಲು ಆಡಿಯೋ, ವಿಡಿಯೋ ಮೂಲಕ ಸ್ಪಷ್ಟನೆ ನೀಡುತ್ತಿದ್ದ ಮಡೆನೂರು ಮನು ಈಗ ಮತ್ತೊಂದು ಹೊಸ ಆಡೀಯೋ ಬಿಡುಗಡೆ ಮಾಡಿದ್ದಾರೆ. ನಾನು ಹಾಗೂ ಆಕೆ ಚನ್ನಾಗಿಯೇ ಇದ್ದೇವೆ. ಆಕೆಯ ಮೇಲೆ ನಾನು ಅತ್ಯಾಚಾರ ನಡೆಸಿಲ್ಲ ಎಂದು ತಿಳಿಸಿದ್ದಾರೆ.
ನಾನು ಮಿಂಚುಗೆ ತಾಳಿ ಕಟ್ಟಿದ್ದೇನೆ. ಅವಳೇ ನನ್ನ ಹೆಂಡತಿ. ನಾನು ಆಕೆ ಜೊತೆ ಸಂಸಾರ ಮಾಡಿದ್ದೇನೆ. ಆಕೆ ನನ್ನ ವಿರುದ್ಧ ಅತ್ಯಾಚಾರ ದೂರು ಕೊಡಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಸ್ವಲ್ಪ ಸಮಯದಿಂದ ಆಕೆಗಾಗಿ ಸಮಯ ಕೊಡಲು ಆಗಿರಲಿಲ್ಲ. ನಾನು, ಅವಳು ಇನ್ಮುಂದೆ ಚನ್ನಾಗಿಯೇ ಇರುತ್ತೇವೆ, ನಮ್ಮಿಬ್ಬರ ನಡುವೆ ಯಾರೂ ಮಧ್ಯಪ್ರವೇಶಿಸುವುದು ಬೇಡ ಎಂದು ಆಡಿಯೋದಲ್ಲಿ ಹೇಳಿದ್ದಾರೆ.