ಬಿದ್ದ ಕಸವನ್ನ ಹೆಕ್ಕಿ ತೆಗೆದ ನಟ ರಣವೀರ್: ಇದು ಕ್ಯಾಮರಾ ಮುಂದೆ ಮಾಡಿದ ನಾಟಕ ಎಂದ ನೆಟ್ಟಿಗರು

ಬಾಲಿವುಡ್ ನಟ ರಣವೀರ್ ಸಿಂಗ್, ತೆರೆಯ ಮೇಲೆ ಬಂದರೆ ಅದರ ಖದರ್ರೇ ಬೇರೆ. ಈ ನಟನ ರಾಕ್ಷಸ ನಟನೆಗೆ ಫಿದಾ ಆಗದವರೇ ಯಾರೂ ಇಲ್ಲ. ಆದರೆ ವಾಸ್ತವದಲ್ಲಿ ಈ ನಟ ತಲೆಹರಟೆ ಮಾತು, ಕೋತಿಯಾಟಗಳಿಗೆನೇ ಹೆಚ್ಚು ಫೇಮಸ್ ಆಗಿದ್ದವರು. ಇತ್ತಿಚೆಗೆ ರಣವೀರ್ ಸಿಂಗ್ ಮುಂಬೈನಲ್ಲಿ ಸೆಲೆಬ್ರಿಟಿ ಹೇರ್ ಡಿಸೈನರ್ ದರ್ಶನ್ ಯೆವಲೇಕರ್ ಅವರ ಸಲೂಲ್ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಿದ್ದರು. ಅದೇ ಸಮಯದಲ್ಲಿ ರಣವೀರ್ ಮಾಡಿದ್ದ ಕೆಲಸವೊಂದು ಟ್ರೋಲ್ ಗೆ ಆಹಾರವಾಗಿದೆ.

ಪ್ರತಿ ಕಾರ್ಯಕ್ರಮದಲ್ಲಿ ಭಿನ್ನ-ಭಿನ್ನ ಬಟ್ಟೆಗಳನ್ನ ಹಾಕಿಕೊಂಡು ಬರುವ ರಣವೀ‌ರ್ ಸಹಜವಾಗಿ ಅಲ್ಲಿ ಎಲ್ಲರ ಗಮನ ಸೆಳೆದಿರುತ್ತಾರೆ. ಈ ಬಾರಿ ಅವರು ಬೂದು ಬಣ್ಣದ ಡೆನಿಮ್‌ಗಳು ಮತ್ತು ಕಪ್ಪು ಬೂಟುಗಳೊಂದಿಗೆ ಕಪ್ಪು ಟಿ-ಶರ್ಟ್ ಅನ್ನು ಧರಿಸಿ, ಕಪ್ಪು ಕನ್ನಡಕವನ್ನ ಹಾಕಿಕೊಂಡು ಬಂದಿದ್ದರು. ಅಲ್ಲೇ ಕೆಲ ಪಾಪರಾಜಿಗಳು ನಿಂತಿದ್ದರು. ಅವರ ಮುಂದೆ ಬರ್ತಿದ್ದ ಹಾಗೆಯೇ ಹಸಿರು ಕಾರ್ಪೆಟ್ ಮೇಲೆ ಬಿದ್ದ ಕಸ ತೆಗೆಯುವುದಕ್ಕೆ ಮುಂದಾಗಿದ್ದಾರೆ. ಆ ಕಸವನ್ನ ಹೆಕ್ಕಿ ಹಾಗೆಯೇ ಮುಂದೆ ಹೋಗಿದ್ದಾರೆ. ಉದ್ದೇಶ ಪೂರಕವಾಗಿಯೇ ಪಾಪರಾಜಿಗಳನ್ನ ನಿರ್ಲಕ್ಷಿಸಿದ್ದಾರೆ ಎಂದು ಈ ವಿಡಿಯೋ ನೋಡಿದ ನೆಟ್ಟಿಗರು ಹೇಳುತ್ತಿದ್ದಾರೆ.

ಈ ವಿಡಿಯೋ ನೋಡಿದ ಒಬ್ಬರು ”ಭಾರತದ ರಸ್ತೆ ರಸ್ತೆಗಳಲ್ಲಿ ರಾಶಿ‌ ಕಸ ಬಿದ್ದಿದೆ. ಅದನ್ನ ಎಂದಿಗೂ ಕಣ್ಣೆತ್ತಿ ನೋಡಿಲ್ಲ. ಆದರೆ ಇಂದು ಕ್ಯಾಮರಾದ ಮುಂದೆ ಈ ನಾಟಕ ಬೇಕಿತ್ತಾ? ” ಎಂದು ಬರೆದಿದ್ದಾರೆ. ಇನ್ನೊಬ್ಬರು ಈ ಓವರ್ ಆ್ಯಕ್ಟಿಂಗ್‌ಗಾಗಿ 50 ರೂಪಾಯಿ ಕಡಿತಗೊಳಿಸಿ’ ಎಂದು ಬರೆದಿದ್ದಾರೆ. ಮಗದೊಬ್ಬರಂತೂ ‘ಇದು ದೀಪಿಕಾಳಿಂದ ಕಲಿತ ಪಾಠ’ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read