ರಾಮನಗರ: ರಾಮನಗರದಲ್ಲಿ ನಿಗೂಢ ಶಬ್ದ ಕೇಳಿಬಂದಿದ್ದು, ಜಿಲ್ಲೆಯ ಜನರು ಆತಂಕಕ್ಕೀಡಾಗಿರುವ ಘಟನೆ ನಡೆದಿದೆ.
ಇದ್ದಕ್ಕಿಂದಂತೆ ರಾಮನಗರದಲ್ಲಿ ನಿಗೂಢ ಶಬ್ದ ಕೇಳಿಬಂದಿದೆ. ಭೂಮಿಯಾಳದಿಂದ ಈ ಶಬ್ದ ಕೇಳಿಬಂದಿದೆ. ಎರಡು ಗಂಟೆ ಅವಧಿಯಲ್ಲಿ ಎರಡು ಬಾರಿ ಜೋರಾದ ಶಬ್ದ ಕೇಳಿಬಂದಿದ್ದು, ನಿಗೂಢ ಶಬ್ಧಕ್ಕೆ ಮನೆಗಳು ಅಲುಗಾಡಿವೆ.
ನಿಗೂಢ ಶಬ್ದದಿಂದಾಗಿ ಜಿಲ್ಲೆಯ ಜನರು ಭಯಭೀತರಾಗಿದ್ದು, ಪ್ರಕೃತಿ ವಿಕೋಪದ ಬಗ್ಗೆ ಆತಂಕ ಮನೆ ಮಾಡಿದೆ.
