ರಾಮನಗರ: ಗಾಂಜಾ ಮತ್ತಿನಲ್ಲಿ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ದಕ್ಷಿಣ ಜಿಲ್ಲೆಯ ರಾಮನಗರದ ತಾವರೆಕೆರೆ ಬಳಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಾಯಚೂರು ಮೂಲದವನು ಎಂದು ತಿಳಿದುಬಂದಿದೆ.
ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಏಕಾಏಕಿ ಮನೆಗೆ ನುಗ್ಗಿದ ಆರೋಪಿ ಅತ್ಯಾಚಾರವೆಸಗಿ ಬಳಿಕ ಸಿಲಿಂಡರ್ ನಿಂದ ಆಕೆಯ ಮುಖಕ್ಕೆ ಹೊಡೆದಿ ಕೊಲೆಗೈದು ಪರಾರಿಯಾಗಿದ್ದಾನೆ. ಸಿಲಿಂಡರ್ ನ್ನು ಪಕ್ಕದ ಗ್ರಾಮಕ್ಕೆ ಎತ್ತಿಕೊಂಡು ಹೋಗಿ ಅದನ್ನು ಮಾರಾಟ ಮಾಡಿದ್ದಾನೆ.
ಕೊಪ್ಪಳದಿಂದ ಕೆಲಸಕ್ಕಾಗಿ ಬಾಲಕಿಯ ಕುಟುಂಬ ತಾವರೆಕೆರೆಗೆ ಬಂದಿತ್ತು. ಬಾಲಕಿ 6ನೇ ತರಗತಿ ಓಡುತ್ತಿದ್ದಳು. ಬಾಲಕಿಯ ತಂದೆ-ತಾಯಿ ಹಾಗೂ ಸಹೋದರ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಬಂದ ಗಾಂಜಾ ಮತ್ತಲ್ಲಿದ್ದ ಕಾಮುಕ ಹೇಯ ಕೃತ್ಯವೆಸಗಿ ಪರಾರಿಯಾಗಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.