‘ರಾಮ ಮಂದಿರ ಪ್ರಾಣ ಪ್ರತಿಷ್ಟೆ’ : 1,265 ಕೆಜಿ ತೂಕದ ಲಡ್ಡು ತಯಾರಿಸಿದ ಭಕ್ತ |Watch Video

ಹೈದರಾಬಾದ್ : ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಟೆ ಕಾರ್ಯಕ್ರಮಕ್ಕಾಗಿ ವ್ಯಕ್ತಿಯೊಬ್ಬರು 1,265 ಕೆಜಿ ತೂಕದ ಲಡ್ಡುವನ್ನು ಸಿದ್ಧಪಡಿಸಿದ್ದಾರೆ. ನಾಗಭೂಷಣ್ ರೆಡ್ಡಿಎಂಬ ಭಕ್ತರು ಸಿದ್ಧಪಡಿಸಿದ ಲಡ್ಡುವನ್ನು ಹೈದರಾಬಾದ್ ನಿಂದ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತಿದೆ.

ರಾಮ ಮಂದಿರಕ್ಕೆ ಲಡ್ಡು

ನಾಗಭೂಷಣ್ ರೆಡ್ಡಿ ಅವರು ‘ಶ್ರೀ ರಾಮ್ ಕ್ಯಾಟರಿಂಗ್’ ಎಂಬ ಕ್ಯಾಟರಿಂಗ್ ಸೇವೆಯನ್ನು ನಡೆಸುತ್ತಿದ್ದು, ರಾಮ ಮಂದಿರದ ಭೂಮಿ ಪೂಜೆ ನಡೆದಾಗ ಅವರು ಭಗವಾನ್ ರಾಮನಿಗೆ ಏನನ್ನಾದರೂ ಕೊಡಬೇಕೆಂದು ಯೋಚಿಸಿದ್ದರಂತೆ. ಅಂತೆಯೇ ಈ ಲಡ್ಡು ತಯಾರಿಸಿದ್ದಾರೆ.

ಮಾಸ್ಟರ್ ದುಶಾಸನ್ ಎಂಬುವವರು ಈ ಲಡ್ಡು ತಯಾರಿಸಿದ್ದು, “ನನಗೆ ತುಂಬಾ ಸಂತೋಷವಾಗಿದೆ. ನಾವು ಇದನ್ನು ತುಂಬಾ ಕಠಿಣ ಪರಿಶ್ರಮದಿಂದ ಮಾಡಿದ್ದೇವೆ ಎಂದಿದ್ದಾರೆ.ಹೈದರಾಬಾದ್ ನಿಂದ ಅಯೋಧ್ಯೆಗೆ ಯಾತ್ರೆಯಾಗಿ ಲಡ್ಡುವನ್ನು ದೊಡ್ಡ ಪೆಟ್ಟಿಗೆಯಲ್ಲಿ ಸಾಗಿಸಲಾಗುತ್ತಿದೆ. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ದೈತ್ಯ ಲಡ್ಡು ತಯಾರಿಸಲು ಸುಮಾರು 30 ಜನರು 24 ಗಂಟೆಗಳ ಕಾಲ ನಿರಂತರವಾಗಿ ಕೆಲಸ  ಮಾಡಿದ್ದಾರೆ.

ಜೈ ಶ್ರೀ ರಾಮ್ ಎಂದು ಬರೆದಿರುವ ದೈತ್ಯ ಲಡ್ಡುವನ್ನು ತೋರಿಸುವ ವೀಡಿಯೋವನ್ನು ವೈರಲ್ ಆಗಿದೆ. ಲಡ್ಡುವನ್ನು ವಿವಿಧ ಡ್ರೈ ಫ್ರೂಟ್ಸ್ ಗಳಿಂದ ಅಲಂಕರಿಸಲಾಗಿದೆ.

https://twitter.com/ANI/status/1747457449131741390?ref_src=twsrc%5Etfw%7Ctwcamp%5Etweetembed%7Ctwterm%5E1747457449131741390%7Ctwgr%5Ee275cf84538f8d2ebe8c53e3621e3efb70732357%7Ctwcon%5Es1_&ref_url=https%3A%2F%2Fwww.india.com%2Fviral%2Fwatch-hyderabad-caterer-prepares-over-1250-kg-laddu-for-ram-mandir-pran-pratishtha-6662598%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read