‘ಸೀತೆಯ ಸೌಂದರ್ಯಕ್ಕೆ ರಾಮ- ರಾವಣ ಹುಚ್ಚರಾಗಿದ್ದರು’ : ಕಾಂಗ್ರೆಸ್ ಸಚಿವನಿಂದ ವಿವಾದಾತ್ಮಕ ಹೇಳಿಕೆ

ಜೈಪುರ :ಸೀತೆಯ ಸೌಂದರ್ಯಕ್ಕೆ ರಾಮ ಹಾಗೂ ರಾವಣ ಇಬ್ಬರೂ ಹುಚ್ಚರಾಗಿದ್ದರು ಎಂದು ರಾಜಸ್ಥಾನದ ಕಾಂಗ್ರೆಸ್ ಸಚಿವ ರಾಜೇಂದ್ರ ಗುಧಾ ಭಗವಾನ್ ರಾಮ ಹಾಗೂ ಸೀತೆಯ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ರಾಜೇಂದ್ರ ಗುಧಾ, ಸೀತಾ ಮಾತೆಯು ತುಂಬಾ ಸುಂದರವಾಗಿದ್ದಳು. ಸೀತೆಯ ಈ ಸೌಂದರ್ಯಕ್ಕೆ ಹಿಂದೆ ಭಗವಾನ್ ರಾಮ ಮತ್ತು ರಾವಣರು ಹುಚ್ಚರಾಗಿದ್ದರು . ಸೀತೆ ಸುಂದರವಾಗಿದ್ದರಿಂದ ರಾಮ ಮತ್ತು ರಾವಣ ನಡುವೆ ಯುದ್ಧ ನಡೆದಿತ್ತು ಎಂದು ಹೇಳುವ  ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಸೀತಾ ಮಾತೆ ಮತ್ತು ಶ್ರೀರಾಮನ ಬಗ್ಗೆ ರಾಜೇಂದ್ರ ಗುಧಾ ಅವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದು ಕಾಂಗ್ರೆಸ್ನ ನಿಜವಾದ ಹಿಂದೂ ವಿರೋಧಿ ಮುಖವನ್ನು ಬಹಿರಂಗಪಡಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನಾವಾಲಾ ಹೇಳಿದ್ದಾರೆ.. ಅಶೋಕ್ ಗೆಹ್ಲೋಟ್ ಸರ್ಕಾರದಿಂದ ಸಚಿವ ರಾಜೇಂದ್ರ ಗುಧಾ ಅವರನ್ನು ವಜಾಗೊಳಿಸಬೇಕು ಎಂದು ಬಿಜೆಪಿ ವಕ್ತಾರರು ಒತ್ತಾಯಿಸಿದ್ದಾರೆ.

ಸಚಿವ ರಾಜೇಂದ್ರ ಗುಧಾ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು, ಅವರು ತಮ್ಮ ಇದೇ ರೀತಿಯ ಹೇಳಿಕೆಗಳೊಂದಿಗೆ ಅನೇಕ ಬಾರಿ ಚರ್ಚೆಯಲ್ಲಿದ್ದರು. ಇತ್ತೀಚೆಗೆ ರಾಜೇಂದ್ರ ಗುಧಾ ಅವರು ತಮ್ಮ ಕ್ಷೇತ್ರದ ಅಧಿಕಾರಿಗಳಿಗೆ ತಮ್ಮ ಪ್ರದೇಶದ ರಸ್ತೆಗಳನ್ನು ಕತ್ರಿನಾ ಕೈಫ್ ಅವರ ಕೆನ್ನೆಯಂತೆ ಮಾಡಬೇಕಾಗುತ್ತದೆ ಎಂದು ಹೇಳಿದ್ದರು.

https://twitter.com/Shehzad_Ind/status/1678619995037679616?ref_src=twsrc%5Etfw%7Ctwcamp%5Etweetembed%7Ctwterm%5E1678619995037679616%7Ctwgr%5Ed38b3146549d64f64b3901abf6961cb6d4508035%7Ctwcon%5Es1_&ref_url=https%3A%2F%2Fhindi.newsroompost.com%2Findia%2Fram-and-ravana-were-mad-because-sita-was-beautiful-rajasthan-minister-rajendra-gudha-gives-controversial-statement%2F903956.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read