ಉಪಾಸನಾ ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿದ ಸೆಲೆಬ್ರಿಟಿಗಳ ದಂಡು

ಸೆಲೆಬ್ರಿಟಿಗಳ ಪಾರ್ಟಿಗಳು ಎಂದರೇ ಹಾಗೆ. ಸಣ್ಣ ಪುಟ್ಟ ಹುಟ್ಟುಹಬ್ಬಗಳಿಂದ ಹಿಡಿದು ಮದುವೆ ಕಾರ್ಯಕ್ರಮಗಳವರೆಗೂ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಾರೆ ಸೆಲೆಬ್ರಿಟಿಗಳು.

ಟಾಲಿವುಡ್‌ನ ಮೆಗಾ ಪವರ್‌ ಸ್ಟಾರ್‌ ಎಂದೇ ಖ್ಯಾತರಾಗಿರುವ ರಾಮ್ ಚರಣ್ ತೇಜಾ ಹಾಗೂ ಉಪಾಸನಾ ಕೊನಿಡೇಲಾ ದಂಪತಿಗಳು ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ವೇಳೆ ಸೀಮಂತದ ಕಾರ್ಯಕ್ರಮವನ್ನು ಮೆಗಾಸ್ಟಾರ್‌ ಚಿರಂಜೀವಿ ಕುಟುಂಬ ಹಮ್ಮಿಕೊಂಡಿತ್ತು.

ವ್ಯಾನಿಟಿ ಫೇರ್‌‌ನಲ್ಲಿ ಅಪ್ಲೋಡ್ ಆಗಿರುವ ಈ ವಿಡಿಯೋ, ಈ ಜಾಲತಾಣದಲ್ಲಿ ಅತ್ಯಂತ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋ ಎಂಬ ದಾಖಲೆ ನಿರ್ಮಿಸಿದೆ.

ದುಬಾಯ್ ಹಾಗೂ ಹೈದರಾಬಾದ್‌ನಲ್ಲಿ ಸೀಮಂತದ ಕಾರ್ಯಕ್ರಮಗಳನ್ನು ಕುಟುಂಬ ಹಮ್ಮಿಕೊಂಡಿತ್ತು. ಈ ವೇಳೆ ಹೈದರಾಬಾದ್‌ನ ಸೆಲೆಬ್ರಿಟಿ ಬಳಗ ಅಲ್ಲು ಅರ್ಜುನ್, ಸಾನಿಯಾ ಮಿರ್ಜಾ ಸೇರಿದಂತೆ ದೊಡ್ಡ ದೊಡ್ಡ ತಾರೆಗಳೆಲ್ಲಾ ಆಗಮಿಸಿ ದಾಂಪತ್ಯ ಜೀವನದ ಮೊದಲ ಬಡ್ತಿ ಪಡೆಯುತ್ತಿರುವ ಜೋಡಿಗೆ ಶುಭ ಹಾರೈಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read