ರಾಖಿಯನ್ನು ಮದುವೆಯಾಗಲು ನಿರಾಕರಿಸಿದ ಪಾಕ್‌ ವರ; ಕಣ್ಣೀರಿಟ್ಟ ನಟಿ…..!

ಪಾಕಿಸ್ತಾನಿ ನಟ ದೋದಿ ಖಾನ್ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ರಾಖಿ ಸಾವಂತ್ ಮನನೊಂದಿರುವ ಜೊತೆಗೆ ಅಸಮಾಧಾನಗೊಂಡಿದ್ದಾರೆ. ಗುರುವಾರ ರಾತ್ರಿ, ದೋದಿ ಖಾನ್ ತಮ್ಮ Instagram ಖಾತೆಯಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿ, ರಾಖಿಯೊಂದಿಗೆ ದಾಂಪತ್ಯ ಜೀವನ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಖಿ, ಕಾಮೆಂಟ್ ವಿಭಾಗದಲ್ಲಿ ಕಣ್ಣೀರಿನ ಮತ್ತು ಒಡೆದ ಹೃದಯದ ಎಮೋಜಿಗಳನ್ನು ಹಾಕಿದ್ದಾರೆ.

ದೋದಿಯ ವೀಡಿಯೊಗೆ ರಾಖಿಯ ಹಲವಾರು ಅಭಿಮಾನಿಗಳು ಸಹ ಪ್ರತಿಕ್ರಿಯಿಸಿದ್ದು, ಭಾರತೀಯ ನಟಿಯ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಮೊದಲು ಯೋಚಿಸದೆ ಪ್ರಸ್ತಾಪ ಏಕೆ ಮಾಡಬೇಕು” ಎಂದು ಒಬ್ಬ ಅಭಿಮಾನಿ ಬರೆದರೆ ಮತ್ತೊಬ್ಬರು “ಇದು ತುಂಬಾ ದುಃಖಕರವಾಗಿದೆ, ಜನರ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ, ನೀವು ಮತ್ತು ರಾಖಿ ಮಾಧ್ಯಮವನ್ನು ಲೆಕ್ಕಿಸದೆ ಮದುವೆಯಾಗಬೇಕು ಮತ್ತು ಸಂತೋಷದ ಜೀವನ ನಡೆಸಬೇಕು” ಎಂದು ಹೇಳಿದ್ದಾರೆ.

ದೋದಿ ಖಾನ್ ತಮ್ಮ ವೀಡಿಯೊ ಸಂದೇಶದಲ್ಲಿ, ರಾಖಿಗೆ ಮದುವೆಯಾಗುವಂತೆ ಪ್ರಸ್ತಾಪಿಸಿದ್ದರೂ, ತಾವು ಈಗ ಮದುವೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಜೊತೆಗೆ ರಾಖಿಯನ್ನು ಹೊಗಳಿದ್ದು, ಅವರು ಹಿಂದೆ ಎದುರಿಸಿದ ಕಷ್ಟಗಳ ಬಗ್ಗೆ ಮಾತನಾಡಿ ಅವಳ ಧೈರ್ಯದಿಂದಾಗಿಯೇ ತಾನು ಅವಳನ್ನು ತುಂಬಾ ಇಷ್ಟಪಟ್ಟೆ ಎಂದು ಉಲ್ಲೇಖಿಸಿದ್ದರು.

ರಾಖಿ ಸಾವಂತ್ ಈ ಹಿಂದೆ ಆದಿಲ್ ಖಾನ್ ದುರ್ರಾನಿಯನ್ನು ವಿವಾಹವಾಗಿದ್ದು ಆದಾಗ್ಯೂ, ಇಬ್ಬರೂ 2023 ರಲ್ಲಿ ಬೇರ್ಪಟ್ಟರು. ಆದಿಲ್‌ಗೆ ಮೊದಲು, ರಾಖಿ ರಿತೇಶ್ ರಾಜ್ ಸಿಂಗ್ ಅವರನ್ನು ಸಹ ವಿವಾಹವಾಗಿದ್ದರು. ಇಬ್ಬರೂ ಬಿಗ್ ಬಾಸ್ 15 ರಲ್ಲಿ ಭಾಗವಹಿಸಿದ್ದು, ಫೆಬ್ರವರಿ 2022 ರಲ್ಲಿ ಶೋ ಕೊನೆಗೊಂಡ ನಂತರ ಬೇರ್ಪಟ್ಟಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read