ರಾಜ್ಯಸಭಾ ಉಪ ಚುನಾವಣೆ: 9 ಅಭ್ಯರ್ಥಿಗಳ ಘೋಷಿಸಿದ ಬಿಜೆಪಿ, ರವನೀತ್ ಬಿಟ್ಟು, ಜಾರ್ಜ್ ಕುರಿಯನ್ ಕಣಕ್ಕೆ

ನವದೆಹಲಿ: ಬಿಜೆಪಿ ವಿವಿಧ ರಾಜ್ಯಗಳಿಂದ ರಾಜ್ಯಸಭಾ ಉಪಚುನಾವಣೆಗೆ 9 ಅಭ್ಯರ್ಥಿಗಳ ಹೆಸರನ್ನು ಸೆಪ್ಟೆಂಬರ್ 3 ರಂದು ಪ್ರಕಟಿಸಿದೆ.

ರಾಜಸ್ಥಾನದಿಂದ ಕೇಂದ್ರ ಸಚಿವರಾದ ರವನೀತ್ ಸಿಂಗ್ ಬಿಟ್ಟು ಮತ್ತು ಮಧ್ಯಪ್ರದೇಶದಿಂದ ಜಾರ್ಜ್ ಕುರಿಯನ್ ಅವರನ್ನು ಕಣಕ್ಕಿಳಿಸಿದೆ.

ಬಿಹಾರದಿಂದ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ, ಒಡಿಶಾದಿಂದ ಮಾಜಿ ಬಿಜೆಡಿ ನಾಯಕಿ ಮಮತಾ ಮೊಹಾಂತ ಮತ್ತು ತ್ರಿಪುರಾದಿಂದ ರಾಜೀಬ್ ಭಟ್ಟಾಚಾರ್ಯ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದೆ.

ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಅಸ್ಸಾಂ -ಮಿಷನ್ ರಂಜನ್ ದಾಸ್

ಅಸ್ಸಾಂ -ರಾಮೇಶ್ವರ ತೇಲಿ

ಬಿಹಾರ -ಮನನ್ ಕುಮಾರ್ ಮಿಶ್ರಾ

ಹರಿಯಾಣ -ಕಿರಣ್ ಚೌಧರಿ

ಮಧ್ಯಪ್ರದೇಶ -ಜಾರ್ಜ್ ಕುರಿಯನ್

ಮಹಾರಾಷ್ಟ್ರ -ಧೈರ್ಯಶೀಲ ಪಾಟೀಲ್

ಒಡಿಶಾ -ಮಮತಾ ಮೊಹಂತ

ರಾಜಸ್ಥಾನ -ಸರ್ದಾರ್ ರವನೀತ್ ಸಿಂಗ್ ಬಿಟ್ಟು

ತ್ರಿಪುರ -ರಾಜೀಬ್ ಭಟ್ಟಾಚಾರ್ಯ

ಭಾರತ ಚುನಾವಣಾ ಆಯೋಗವು(ECI) ರಾಜ್ಯಸಭೆಯಲ್ಲಿ ಖಾಲಿ ಇರುವ 12 ಸ್ಥಾನಗಳಿಗೆ ಸೆಪ್ಟೆಂಬರ್ 3 ರಂದು ಚುನಾವಣೆಯನ್ನು ನಿಗದಿಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read