ದೀಪಕ್ ಮಧುವನಹಳ್ಳಿ ನಿರ್ದೇಶನದ ಗುರುನಂದನ್ ಅಭಿನಯದ ಬಹು ನಿರೀಕ್ಷಿತ ‘ರಾಜು ಜೇಮ್ಸ್ ಬಾಂಡ್’ ಚಿತ್ರ ಈಗಾಗಲೇ ತನ್ನ ಟೀಸರ್ ಹಾಗೂ ಹಾಡುಗಳಿಂದಲೇ ಸಕ್ಕತ್ ಸೌಂಡ್ ಮಾಡಿದ್ದು, ಮುಂದಿನ ತಿಂಗಳು ಡಿಸೆಂಬರ್ 27ಕ್ಕೆ ತೆರೆ ಮೇಲೆ ಬರಲಿದೆ.
ಈ ಚಿತ್ರವನ್ನು ಕರ್ಮ ಬ್ರೋ ಬ್ಯಾನರ್ ನಲ್ಲಿ ಮಂಜುನಾಥ್ ವಿಶ್ವಕರ್ಮ, ಕಿರಣ್ ಭರ್ತೂರ್ ನಿರ್ಮಾಣ ಮಾಡಿದ್ದು,’ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ಸೇರಿದಂತೆ ಮೃದುಲಾ, ರವಿಶಂಕರ್, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಜೈ ಜಗದೀಶ್, ತಬಲಾ ನಾಣಿ, ಮಂಜುನಾಥ್ ಹೆಗಡೆ, ವಿಜಯ್ ಚೆಂಡೂರ್ ಬಣ್ಣ ಹಚ್ಚಿದ್ದಾರೆ, ಅಮಿತ್ ಜಾವಲ್ಕರ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ, ಮಾಸ್ ಮಾದ ಅವರ ಸಾಹಸ ನಿರ್ದೇಶನ, ಹಾಗೂ ಮುರಳಿ ಮಾಸ್ಟರ್ ನೃತ್ಯ ನಿರ್ದೇಶನವಿದೆ. ಜೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ.