ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ವ್ಯಕ್ತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿನೋದ್ ಕುಮಾರ್ ಶೆಟ್ಟಿ ಬಂಧಿತ ಆರೋಪಿ. ಡಾ.ರಾಜ್ ಕುಮಾರ್ ಹಾಗೂ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಮಾತನಾಡಿ, ವಿಡಿಯೋ ಹಂಚಿಕೊಂಡಿದ್ದ. ಈ ಬಗ್ಗೆ ದೂರು ದಾಖಲಾಗಿತ್ತು.
ರಾಜ್ ಕುಮಾರ್ ಹಾಗೂ ಕುಟುಂಬದ ಬಗ್ಗೆ ಅವಾಚ್ಯವಾಗಿ ನಿಂದಿಸಿ ಮಾತನಾಡಿದ್ದಲ್ಲದೇ, ಬಾಯಿಗೆ ಬಂದಂತೆ ಏಕವಚನದಲ್ಲಿ ಹೇಳಿಕೆ ನೀಡಿ ತಾಕತ್ತಿದ್ದರೆ ಬನ್ನಿ ಎಂದು ಸವಾಲು ಹಾಕಿದ್ದ. ಜಾಲತಾಣಗಳಲ್ಲಿ ಹೆಸರಾಗುತ್ತೆ ಎಂಬಕಾರಣಕ್ಕೆ ನಾಲಿಗೆ ಹರಿಬಿಟ್ಟಿದ್ದ. ಸದ್ಯ ವಿನೋದ್ ನನ್ನು ಪೊಲೀಸರು ಬಂಧಿಸಿದ್ದಾರೆ.