ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಶಂಕರ್ ನಿರ್ದೇಶನದ 2018 ನವೆಂಬರ್ 29 ರಂದು ವಿಶ್ವಾದ್ಯಂತ ತೆರೆಕಂಡಿತ್ತು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆದಿತ್ತು. ‘2.0’ ಬಿಡುಗಡೆಯಾಗಿ ಇಂದಿಗೆ ಆರು ವರ್ಷಗಳಾಗಿದ್ದು, ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸುಭಾಸ್ಕರನ್ ಅಲ್ಲಿರಾ ನಿರ್ಮಾಣ ಮಾಡಿದ್ದು, ರಜನಿಕಾಂತ್, ಅಕ್ಷಯ್ ಕುಮಾರ್ , ಆಮಿ ಜಾಕ್ಸನ್, ಸೇರಿದಂತೆ ಸುಧಾಂಶು ಪಾಂಡೆ, ಆದಿಲ್ ಹುಸೇನ್, ಇಶಾರಿ ಕೆ. ಗಣೇಶ್, ಕೈಜಾದ್ ಕೊತ್ವಾಲ್, ಮಾಯಿಲ್‌ಸಾಮಿ, ಪ್ರಿಯಾ ಪ್ರಿನ್ಸ್, ಮಯೂರ್ ಬನ್ಸಿವಾಲ್, ಅವಿಜಿತ್ ದತ್, ಅನಿತಾ ಸಂಪತ್, ಬಣ್ಣ ಹಚ್ಚಿದ್ದಾರೆ. ಎಆರ್ ರೆಹಮಾನ್ ಸಂಗೀತ ಸಂಯೋಜನೆ ನೀಡಿದ್ದು, ಆಂಟೋನಿ ಸಂಕಲನ, ಹಾಗೂ ನೀರವ್ ಶಾ ಛಾಯಾಗ್ರಹಣವಿದೆ.