ʼತಲೈವರ್ 170ʼ ಯಲ್ಲಿ ಸೂಪರ್ ಸ್ಟಾರ್ ಗಳ ಸಮಾಗಮ; 32 ವರ್ಷದ ಬಳಿಕ ರಜಿನಿಕಾಂತ್, ಬಿಗ್ ಬಿ ಒಟ್ಟಿಗೆ ಅಭಿನಯ

ಸೂಪರ್ ಸ್ಟಾರ್ ರಜನಿಕಾಂತ್ ಪ್ರಮುಖ ಪಾತ್ರದಲ್ಲಿರುವ ʼತಲೈವರ್ 170ʼ ಮುಂಬರುವ ತಮಿಳು ಚಲನಚಿತ್ರವಾಗಿದ್ದು ಅದರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಚಿತ್ರವನ್ನು ಟಿಜೆ ಜ್ಞಾನವೇಲ್ ನಿರ್ದೇಶಿಸಿದ್ದು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಈ ಚಿತ್ರದಲ್ಲಿ ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಈ ಪಾತ್ರವನ್ನು ಈ ಹಿಂದೆ ಚಿಯಾನ್ ವಿಕ್ರಮ್‌ಗೆ ನೀಡಲಾಗಿತ್ತು ಎಂದು ಹೇಳಲಾಗುತ್ತದೆ. ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ ಬಿಗ್ ಬಿ 32 ವರ್ಷಗಳ ನಂತರ ರಜನಿಕಾಂತ್ ಜೊತೆ ಸೇರಲಿದ್ದು ತಲೈವರ್ 170 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ರಜನಿ ಮತ್ತು ಅಮಿತಾಬ್ ಬಚ್ಚನ್ ಇಬ್ಬರೂ ಕೊನೆಯದಾಗಿ 1991 ರ ಹಮ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read