ಅಬ್ಬಾ….! ತಲೆ ಮೇಲೆ ಮೂರು ಸಿಲಿಂಡರ್‌ಗಳನ್ನು ಹೊತ್ತು ಬ್ಯಾಲೆನ್ಸ್ ಮಾಡಿದ ಕಲಾವಿದ; ವಿಡಿಯೋ ವೈರಲ್

ಒಂದು ಸಿಲಿಂಡರ್ ಅನ್ನು ಎತ್ತಿತರುವುದೇ ಕಷ್ಟ. ಅದು ಖಾಲಿ ಸಿಲಿಂಡರ್ ಆಗಿದ್ರೂ ಎತ್ತಿ ತರುವುದು ಅಷ್ಟು ಸುಲಭವಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ರಾಜಸ್ಥಾನಿ ಕಲಾವಿದನೊಬ್ಬ ಸಿಲಿಂಡರ್ ಅನ್ನು ತಲೆ ಮೇಲೆ ಬ್ಯಾಲೆನ್ಸ್ ಮಾಡುವ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣ ಬಂದ ಬಳಿಕ ಅನೇಕ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಇದೀಗ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ರಾಜಸ್ಥಾನಿ ಕಲಾವಿದ ತನ್ನ ತಲೆಯ ಮೇಲೆ ಸಿಲಿಂಡರ್‌ಗಳನ್ನು ಬ್ಯಾಲೆನ್ಸಿಂಗ್ ಮಾಡುವ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವುದನ್ನು ತೋರಿಸುತ್ತದೆ. ಈ ಯುವಕ ಒಂದಲ್ಲ, ಮೂರು ಸಿಲಿಂಡರ್ ಗಳನ್ನು ತಲೆ ಮೇಲೆ ಹೊತ್ತು ಬ್ಯಾಲೆನ್ಸ್ ಮಾಡಿದ್ದಾನೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ರೀಲ್‌ನಲ್ಲಿರುವ ಕಲಾವಿದನನ್ನು ಪ್ರವೀಣ್ ಪ್ರಜಾಪತ್ ಎಂದು ಗುರುತಿಸಲಾಗಿದೆ. ತನ್ನ ತಲೆಯ ಮೇಲೆ ಎರಡು ಗ್ಲಾಸ್ ಕಪ್‌ಗಳ ಸಹಾಯದಿಂದ ಅನಾಯಾಸವಾಗಿ ಮೂರು ಸಿಲಿಂಡರ್‌ಗಳನ್ನು ಬ್ಯಾಲೆನ್ಸ್ ಮಾಡುವುದನ್ನು ನೋಡಬಹುದು. ಈತನ ಪ್ರತಿಭೆಗೆ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ.

ವಿಡಿಯೋದಲ್ಲಿ, ಪ್ರವೀಣ್ ಆತ್ಮವಿಶ್ವಾಸದ ನಗುವಿನ ಜೊತೆಗೆ ಸಿಲಿಂಡರ್‌ಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಾಣಬಹುದು. ಅಷ್ಟೇ ಅಲ್ಲ, ಮೂರು ಸಿಲಿಂಡರ್ ಗಳನ್ನು ಹೊತ್ತುಕೊಂಡ ಯುವಕ ಕೈಯಲ್ಲಿ ಹಿಡಿದುಕೊಳ್ಳದೆ ನೃತ್ಯ ಮಾಡಿದ್ದಾನೆ. ಈ ವಿಡಿಯೋ ನೋಡಿ ನೆಟ್ಟಿಗರು ನಿಬ್ಬೆರಗಾಗಿದ್ದಾರೆ.

ಪ್ರವೀಣ್ ಅವರ ಇನ್ಸ್ಟಾಗ್ರಾಂ ಪ್ರೊಫೈಲ್ ಅಂತಹ ವಿಡಿಯೋಗಳಿಂದ ತುಂಬಿದೆ. ಅಲ್ಲಿ ಅವರು ತಮ್ಮ ತಲೆಯ ಮೇಲೆ ವಸ್ತುಗಳನ್ನು ಸಮತೋಲನಗೊಳಿಸುವಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ಅವರು ರಿಯಾಲಿಟಿ ಶೋ ಒಂದರಲ್ಲೂ ಭಾಗವಹಿಸಿದ್ದರು. ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ಭಾಗಿಯಾಗಿದ್ದ ಅವರು, ರಿಯಾಲಿಟಿ ಶೋನ ವೇದಿಕೆಯಲ್ಲಿ ಶಿಲ್ಪಾ ಶೆಟ್ಟಿ, ಬಾದ್‌ಶಾ, ಕಿರಣ್ ಖೇರ್ ಮತ್ತು ಇತರ ತೀರ್ಪುಗಾರರ ಸಮ್ಮುಖದಲ್ಲಿ ಪ್ರದರ್ಶನ ನೀಡಿದ್ದಾರೆ.

ಇದೀಗ ಅವರ ಇತ್ತೀಚಿನ ರೀಲ್ (ಸಿಲಿಂಡರ್ ಅನ್ನು ತಲೆಯಲ್ಲಿ ಹೊತ್ತುಕೊಂಡ) 20,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಹಲವಾರು ಪ್ರಶಂಸೆಗಳನ್ನು ಪಡೆದಿದೆ. ಮೂರು ಸಿಲಿಂಡರ್ ಅನ್ನು ಈ ಕಲಾವಿದ ಅದು ಹೇಗೆ ಬ್ಯಾಲೆನ್ಸ್ ಮಾಡಿದ ಅನ್ನೋದು ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ. ನೀವು ತುಂಬಾ ಬಲಶಾಲಿ ಎಂದು ನೆಟ್ಟಿಗರು ಕಾಮೆಂಟ್‌ ವಿಭಾಗದಲ್ಲಿ ಹೊಗಳಿದ್ದಾರೆ.

https://www.youtube.com/shorts/fbxYXYyMpuA?feature=share

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read