Rajasthan Election | ‘ಭಾರತ್ ಮಾತಾ ಹೈ ಕೌನ್’ ಎಂದ ರಾಹುಲ್; ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದ ಹೇಳಿಕೆ

ಜೈಪುರ: ರಾಜಸ್ಥಾನ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ರಾಹುಲ್ ಗಾಂಧಿ ಅವರು ರಾಜಸ್ಥಾನದ ಬುಂದಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ‘ಭಾರತ್ ಮಾತಾ ಕಿ ಜೈ’ ಎಂದು ಹೇಳುತ್ತಾ ಪ್ರಧಾನಿ ನರೇಂದ್ರ ಮೋದಿಯವರು ಭಾರತ್ ಮಾತಾಕಿ ಜೈ ಎನ್ನುವ ಬದಲಿಗೆ ‘ಅದಾನಿ ಜೀ ಕಿ ಜೈ’ ಎಂದು ಹೇಳುತ್ತಾರೆ. ಏಕೆಂದರೆ ಅವರು ಅದಾನಿ ಪರವಾಗಿ ಕೆಲಸ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ರಾಜಸ್ಥಾನದಲ್ಲಿ ನಡೆದ ರ್ಯಾಲಿಯ ನಡುವೆ, ರಾಹುಲ್ ಗಾಂಧಿಯವರ ಈ ಹೇಳಿಕೆ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ರಾಹುಲ್ ಗಾಂಧಿಯವರ “ಭಾರತ್ ಮಾತಾ ಹೈ ಕೌನ್?” ಎಂಬ ಕುತೂಹಲಕಾರಿ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ.

ರಾಹುಕ್ ಗಾಂಧಿಯವರ ರ್ಯಾಲಿಯ ಕಿರುಚಿತ್ರವು ತ್ವರಿತವಾಗಿ ವೈರಲ್ ಆಗಿದ್ದು, ವಿವಿಧ ಆನ್‌ಲೈನ್ ಸಮುದಾಯಗಳಲ್ಲಿ ಪ್ರತಿಕ್ರಿಯೆಗಳು ಮತ್ತು ವ್ಯಾಖ್ಯಾನಗಳ ಬಿರುಗಾಳಿಯನ್ನು ಎಬ್ಬಿಸಿದೆ.

ರಾಹುಲ್ ಗಾಂಧಿಯವರ ವಾಕ್ಚಾತುರ್ಯದ ಪ್ರಶ್ನೆಯು ಆನ್‌ಲೈನ್‌ನಲ್ಲಿ ವೈವಿಧ್ಯಮಯ ವ್ಯಾಖ್ಯಾನ ಮತ್ತು ಹಾಸ್ಯಮಯ ಟೇಕೆಗಳ ಕೇಂದ್ರಬಿಂದುವಾಗಿದೆ. ರ್ಯಾಲಿಯೊಳಗಿನ ಹೇಳಿಕೆಯ ಹಿಂದಿನ ಉದ್ದೇಶವು ಅಸ್ಪಷ್ಟವಾಗಿಯೇ ಉಳಿದಿದೆ. ಆದರೆ ನೆಟಿಜನ್‌ಗಳು ವ್ಯಂಗ್ಯವಾಗಿ ಮತ್ತು ವಿಡಂಬನಾತ್ಮಕ ಪೋಸ್ಟ್‌ಗಳನ್ನು ಹಾಕಿ ಹೊಸ ಚರ್ಚೆಯನ್ನೇ ಆರಂಭಿಸಿದ್ದಾರೆ.

https://twitter.com/SureshNakhua/status/1726145454713561415

https://twitter.com/nigh_ai_crawler/status/1726154068891173109

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read