ಬೆಂಗಳೂರು: ಸಚಿವ ಸಂಪುಟದಿಂದ ಅವಮಾನಕರ ರೀತಿಯಲ್ಲಿ ಪದಚ್ಯುತಗೊಂಡಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣ ಆಕ್ರೋಶಗೊಂಡಿದ್ದು, ದೆಹಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ತಮ್ಮಿಂದ ಯಾವುದೇ ವಿವರಣೆಯನ್ನು ಕೇಳದೆ ಏಕಾಏಕಿ ಸಂಪುಟದಿಂದ ವಜಾ ಮಾಡಿದ ತಮಗೊಂದು ನೀತಿ ಬೇರೆಯವರಿಗೆ ಒಂದು ನೀತಿಯೇ ಎಂದು ಎಐಸಿಸಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಲು ದೆಹಲಿಯ ಜಂತರ್ ಮಂಥರ್ ನಲ್ಲಿ ಬೆಂಬಲಿಗರು ಮತ್ತು ವಾಲ್ಮೀಕಿ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ದೆಹಲಿಯಲ್ಲಿ ಸಭೆ ನಡೆಸಲು ಸ್ಥಳೀಯ ಆಡಳಿತದ ಅನುಮತಿ ಕೋರಿದ್ದಾರೆ. ಜನರನ್ನು ಕರೆದೊಯ್ಯಲು ಎರಡು ವಿಶೇಷ ರೈಲುಗಳಿಗಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸುಮಾರು 10,000 ಜನರನ್ನು ಕರೆದುಕೊಂಡು ಹೋಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ/ ಈಗಾಗಲೇ 7 ಸಾವಿರ ಮಂದಿ ಹೆಸರನ್ನು ನೋಂದಾಯಿಸಿದ್ದು. 15 ಮಠಾಧೀಶರು ರಾಜಣ್ಣ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಬಿ. ನಾಗೇಂದ್ರ ಬಳಿಕ ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಡುವ ಮೂಲಕ ವಾಲ್ಮೀಕಿ ನಾಯಕ ಸಮುದಾಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎನ್ನುವ ಸಂದೇಶ ರವಾನಿಸಲು ರಾಜಣ್ಣ ಬೆಂಬಲಿಗರು ದೆಹಲಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.